ಬೆಂಗಳೂರು : ಡಿಕೆಶಿ ಆಪ್ತ ವಿಜಯ್ ಮುಳಗುಂದ್ಗೆ ಸಿಬಿಐ ನೋಟಿಸ್ ನೀಡಿದ ವಿಚಾರವಾಗಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ಮಂತ್ರಿಗಳದ್ದು ವ್ಯವಹಾರ ತನಿಖೆ ಮಾಡ್ಸಿ ನೋಡೊಣ ಎಂದು ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ
ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಡಿಕೆಶಿ ಆಪ್ತ ವಿಜಯ್ ಮುಳಗುಂದ್ಗೆ ಆಗಸ್ಟ್ 30 ರಂದು ಬೆಂಗಳೂರು ಸಿಟಿಐ ಕಚೇರಿಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ
ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ಮುಳಗುಂದ್ ನಮ್ಮ ಪಾರ್ಟಿಯ ಜನರಲ್ ಸೆಕ್ರೆಟರಿಯಾಗಿದ್ದರು. ಅವರೊಬ್ಬರೇ ಅಲ್ಲ 30-40 ಜನರಿಗೆ ನೋಟಿಸ್ ಕೊಟ್ಟಿದ್ದಾರೆ. ನನ್ನ ಜತೆ ವ್ಯವಹಾರ, ಅಗ್ರಿಮೆಂಟ್ ಮಾಡಿದವ್ರಿಗೂ ನೋಟಿಸ್ ಕೊಟ್ಟಿದ್ದಾರೆ. 60-70 ಜನರಿಗೆ ಐಟಿ , ಇಡಿ ನೋಟಿಸ್ ಬಂದಿದೆ ಕಿರುಕಳ ನೀಡೋದಕ್ಕೂ ಲಿಮಿಟ್ ಇರಬೇಕು ಎಷ್ಟು ಅಂತಾ ಕಿರುಕುಳ ಕೊಡುತ್ತೀರಾ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂತ್ರಿಗಳದ್ದು ವ್ಯವಹಾರ ತನಿಖೆ ಮಾಡ್ಸಿ ನೋಡೊಣ. ಶಾಸಕರಾದಾಗ ಎಷ್ಟಿತ್ತು ಈಗ ಎಷ್ಟಿದೆ ಎಂಬುವುದನ್ನು ತನಿಖೆ ಮಾಡಿಸಿ ಅವರೆಲ್ಲ ಬೆಳ್ಳುಳ್ಳಿ ಅಡಿಕೆ ಮಾರಾಟ ಮಾಡಿ ಆಸ್ತಿ ಮಾಡಿದ್ರಾ? ನಾನು ಆರ್ಟಿಐನಲ್ಲಿ ಮಂತ್ರಿಗಳ ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದೇನೆ ಎಂದು ಡಿಕೆಶಿ ಆಪ್ತ ವಿಜಯ್ ಮುಳಗುಂದ್ಗೆ ಸಿಬಿಐ ನೋಟಿಸ್ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ