ಬೆಂಗಳೂರು : ರಾಜ್ಯದಲ್ಲಿ 108 ಆಂಬ್ಯುಲೆನ್ಸ್ ಸೇವೆಗೆ ಮತ್ತಷ್ಟು ಬಲ ನೀಡಲು 262 ಹೊಸ ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ಉಪಕರಣ ಖರೀದಿಸಲು 98.90 ಕೋಟಿ ರೂ. ವೆಚ್ಚಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ,262 ಹೊಸ ಆ್ಯಂಬುಲೆನ್ಸ್ ಖರೀದಿಗೆ ಒಪ್ಪಿಗೆ ನೀಡಲಾಗಿದ್ದು, 43.27 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ವೈದ್ಯಕೀಯ ಉಪಕರಣ ಖರೀದಿಗೆ 27 ಕೋಟಿ ಅನುದಾನ ನೀಡಲಾಗಿದೆ. ಆ್ಯಂಬುಲೆನ್ಸ್ ನಲ್ಲಿ ಅಳವಡಿಸುವ ಉಪಕರಣ ಖರೀದಿಸಲು ಒಟ್ಟು 98 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ ಎಂದರು.
ಬಳ್ಳಾರಿ ಏರ್ಪೋಟ್ ನಿರ್ಮಾಣ ಟೆಂಡರ್ ರದ್ಧುಗೊಳಿಸಲಾಗಿದೆ. ಹೊಸದಾಗಿ ಟೆಂಡರ್ ಕರೆಯಲು ಅನುಮತಿಯನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನೀಡಲಾಗಿದೆ. ಹೊಸ ವಿಮಾನನಿಲ್ದಾಣ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದು ತಿಳಿಸಿದರು.
ಗೋಕಾಕ್ ಕೌಜಲಗಿ ಸುತ್ತಮುತ್ತ ಲಿಫ್ಟ್ ಇರಿಗೇಶನ್ ಗಾಗಿ 32 ಕೋಟಿ ಅನುದಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರು ರಸ್ತೆ ಅಭಿವೃದ್ಧಿಗೆ ಅನುಮತಿ ನೀಡಲಾಗಿದೆ. ವರ್ತೂರು ಬಳಿ ಎಲಿವೇಟೆಡ್ ಕಾಮಗಾಗಿ 1.3 ರಿಂದ 1.9ಗೆ ವಿಸ್ತರಣೆಕ್ಕೆ ಅನುಮತಿ ನೀಡಲಾಗಿದೆ. ಇದಕ್ಕೆ ಬೇಕಾದ ಭೂಸ್ವಾಧೀನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, 2095 ಕೋಟಿ ವೆಚ್ಚದ ಯೋಜನೆಗೆ ಅನುಮತಿ ನೀಡಲಾಗಿದೆ ಎಂದರು.
ಬಳ್ಳಾರಿಯಲ್ಲಿ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಭೂಮಿ ನೀಡಿಕೆ ಮಾಡಲಾಗುತ್ತಿದೆ. 5 ಎಕರೆ, 14 ಎಕರೆ ಭೂಮಿ ನೀಡಲು ಒಪ್ಪಿಗೆ ನೀಡಲಾಗಿದೆ. ಲೀಸ್ ಆಧಾರದ ಮೇಲೆ ಭೂಮಿ ನೀಡಲು ಒಪ್ಪಿಗೆಯನ್ನು ನೀಡಿದೆ. ಪುತ್ತೂರಿನಲ್ಲಿ ಕ್ರಿಕೆಟ್ ಮೈದಾನಕ್ಕೆ ಭೂಮಿಗೆ 23 ಎಕರೆ ಭೂಮಿ ಲೀಸ್ ಮೇಲೆ ನೀಡಲು ಸಮ್ಮತಿಸಲಾಗಿದೆ ಎಂದು ಹೇಳಿದರು.
ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕಾಗಿ ತೋರಣಗಲ್, ದರೋಜಿಗೆ 125 ಕೋಟಿ, ಅರಕಲಗೂಡಿಗೆ 94.71 ಕೋಟಿ, ಚಿಕ್ಕಮಗಳೂರು ತಾಲೂಕಿನ ಕುಡಿಯುವ ನೀರಿಗೆ 1025 ಕೋಟಿ, ಗುಡಿಬಂಡೆ ತಾಲೂಕಿನಲ್ಲಿ ಕುಡಿಯುವ ನೀರಿಗೆ 24 ಕೋಟಿ ಅನುದಾನ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಅತ್ಯಾಚಾರ ತಡೆಗಟ್ಟಲು ಡಿವೈಸರ್ ಅಳವಡಿಕೆ ಮಾಡಲಾಗುತ್ತದೆ. ವೆಹಿಕಲ್ ಟ್ರಾಕಿಂಗ್ ಡಿವೈಸರ್ ಅಳವಡಿಕೆ ಮಾಡಲಿದ್ದೇವೆ. ಸಾರ್ವಜನಿಕ ವಾಹನಗಳಿಗೆ ಅಳವಡಿಸಲು ಸಮ್ಮತಿಯನ್ನು ಸಚಿವ ಸಂಪುಟ ನೀಡಿದೆ. 492 ಕೋಟಿ ಅನುದಾನ ನೀಡಲು ಸಮ್ಮತಿಸಲಾಗಿದೆ. ಕೇಂದ್ರದಿಂದ ನೀಡಲಾಗುವ ಅನುದಾನದಲ್ಲಿ ಉಪಯೋಗ ಮಾಡಲಾಗುತ್ತದೆ ಎಂದು ತಿಳಿಸಿದರು.