ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಪ್ರಕರಣದ ಆರೋಪಿ ರಾಘವಭಟ್ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದ್ದು, ಪ್ರದೀಪ್ ಜೊತೆ 10 ಲಕ್ಷ ರೂಪಾಯಿ ವ್ಯವಹಾರ ನಡೆದಿರುವುದು ತಿಳಿದು ಬಂದಿದೆ ಎನ್ನಲಾಗಿದೆ.
ಯಾವುದೋ ವ್ಯವಹಾರದಲ್ಲಿ ಉದ್ಯಮಿ ಪ್ರದೀಪ್ ಜೊತೆಗಿನ 10 ಲಕ್ಷ ಡೀಲ್ ಕುದುರಿಸಲಾಗಿದ್ದು, ರಾಘವ ಭಟ್ ನಗದು ಮೂಲಕ 3 ಲಕ್ಷ ವಾಪಸ್ ಕೊಟ್ಟಿದ್ದಾನೆ. ಉಳಿದ 7 ಲಕ್ಷವನ್ನು ಚೆಕ್ ಮೂಲಕ ನೀಡಿದ್ದಾನೆ. ಆದರೆ ಪ್ರದೀಪ್ಗೆ ರಾಘವ ಭಟ್ ನೀಡಿದ್ದ ಚೆಕ್ ಬೌನ್ಸ್ ಆಗಿದ್ದು, . ಈ ಹಿನ್ನೆಲೆ ಪ್ರದೀಪ್ ನ್ಯಾಯಾಲಯದಲ್ಲಿ ಚೆಕ್ಬೌನ್ಸ್ ಕೇಸ್ ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಯುತ್ತಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಇನ್ನೂ, ಡೆತ್ ನೋಟ್ ನಲ್ಲಿ ಗೋಪಿ, ಸೋಮಯ್ಯ, ರಮೇಶ್ ರೆಡ್ಡಿ ಹೆಸರು ಕೂಡ ಉಲ್ಲೇಖವಾಗಿದ್ದು, ಕಗ್ಗಲಿಪುರ ಠಾಣಾ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಮೂವರು ಕೂಡ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಮತ್ತೊಮ್ಮೆ ನೋಟಿಸ್ ನೀಡಲು ಕಗ್ಗಲೀಪುರ ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ.ಪ್ರಕರಣ ಸಂಬಂಧ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಐವರು ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ಕಗ್ಗಲೀಪುರ ಪೊಲೀಸರು ನೊಟೀಸ್ ನೀಡಿದ್ದಾರೆ.ಪ್ರಕರಣದ ತನಿಖೆಯನ್ನು ಕೈಗೊಂಡಿರುವ ರಾಮನಗರ ಪೊಲೀಸರಿಗೆ ಆತ್ಮಹತ್ಯೆಗೂ ಮುನ್ನ ಪ್ರದೀಪ್ ಬರೆದಿಟ್ಟಿದ್ದ ಮೂರು ಡೆತ್ ನೋಟ್ ಗಳು ಪತ್ತೆಯಾಗಿವೆ. ಡೆತ್ ನೋಟ್ ನಲ್ಲಿ ಪ್ರದೀಪ್ ಉಲ್ಲೇಖಿಸಿದ್ದ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಐವರು ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ಕಗ್ಗಲೀಪುರ ಪೊಲೀಸರು ನೊಟೀಸ್ ನೀಡಿದ್ದಾರೆ. ಇನ್ನೂ, ಪ್ರದೀಪ್ ಪತ್ನಿಯ ಮೇಲೂ ಕೆಲವು ಅನುಮಾನಗಳಿದ್ದು, ನಮಿತಾಳ ಫೋನ್ ನ ಸಿಡಿಆರ್ ಅನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
BIG NEWS : ʻಶ್ರೀಮಂತ ಸಂಸ್ಕೃತಿ ಹೊಂದಿರುವ ದೇಶಕ್ಕೆ ಉಜ್ವಲ ಭವಿಷ್ಯವಿದೆʼ: ಸಿಎಂ ಬೊಮ್ಮಾಯಿ
BREAKING NEWS : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಆರೋಪಿಗಳ ಮಾಹಿತಿಗೆ 14 ಲಕ್ಷ ರೂ. ಬಹುಮಾನ : NIA ಘೋಷಣೆ