ನ್ಯೂಯಾರ್ಕ್ : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಭಾರತದ ಶಾಶ್ವತ ಸ್ಥಾನಕ್ಕಾಗಿ ಬ್ರಿಟನ್ ಪ್ರತಿಪಾದಿಸಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಭಾರತವನ್ನ ಮಾತ್ರವಲ್ಲದೇ ಜರ್ಮನಿ, ಜಪಾನ್ ಮತ್ತು ಬ್ರೆಜಿಲ್’ನ್ನ ಖಾಯಂ ಸದಸ್ಯರನ್ನಾಗಿ ಮಾಡಲು ಬ್ರಿಟನ್ ಬಲವಾಗಿ ಪ್ರತಿಪಾದಿಸಿದೆ. ಈ ಮೂಲಕ ಭದ್ರತಾ ಮಂಡಳಿಯ ವಿಸ್ತರಣೆಯ ಅಡಿಯಲ್ಲಿ, ಖಾಯಂ ಮತ್ತು ಶಾಶ್ವತವಲ್ಲದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಬ್ರಿಟನ್ ಹೇಳಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನ ಸುಧಾರಿಸುವ ಕುರಿತು ಮಾತನಾಡಿದ ಬ್ರಿಟನ್ನ ಖಾಯಂ ಪ್ರತಿನಿಧಿ ಬಾರ್ಬರಾ ವುಡ್ವರ್ಡ್, ನಮ್ಮ ನಿಲುವು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು. ಕಾಯಂ ಮತ್ತು ತಾತ್ಕಾಲಿಕ ಸೀಟುಗಳನ್ನ ಹೆಚ್ಚಿಸುವ ವಿಚಾರವನ್ನ ಬಹಳ ದಿನಗಳಿಂದ ಎತ್ತುತ್ತಲೇ ಬಂದಿದ್ದೇವೆ. ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ, ಭಾರತದೊಂದಿಗೆ ಜರ್ಮನಿ, ಜಪಾನ್ ಮತ್ತು ಬ್ರೆಜಿಲ್ ಶಾಶ್ವತ ಸ್ಥಾನಗಳನ್ನ ಪಡೆಯಬೇಕು.
ಸುಧಾರಣೆಯು ದೀರ್ಘಕಾಲದವರೆಗೆ ಬಾಕಿ ಉಳಿದಿದೆ.!
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಾರ್ಷಿಕ ಚರ್ಚೆಯ ಸಂದರ್ಭದಲ್ಲಿ ಬ್ರಿಟನ್ ಈ ವಿಷಯವನ್ನ ಪ್ರಸ್ತಾಪಿಸಿತು. 15 UNSC ಸದಸ್ಯರ ಸಂಖ್ಯೆಯನ್ನ ವಿಸ್ತರಿಸಬೇಕೆಂದು ಬ್ರಿಟನ್ ಬಯಸಿದೆ. ಈ ಸಮಯದಲ್ಲಿ ಇಡೀ ಪ್ರಪಂಚವು ಅಂತರ್ಸಂಪರ್ಕಿತ ಬಿಕ್ಕಟ್ಟನ್ನ ಎದುರಿಸುತ್ತಿದೆ ಎಂದು ಬ್ರಿಟನ್ ಹೇಳಿದೆ.
ಯುಎನ್ಎಸ್ಸಿಯ ಕಾರ್ಯನಿರ್ವಹಣೆಯನ್ನ ಪಾರದರ್ಶಕ, ಒಳಗೊಳ್ಳುವ, ಜವಾಬ್ದಾರಿಯುತ ಮತ್ತು ಪರಿಣಾಮಕಾರಿ ಮಾಡುವ ಅವಶ್ಯಕತೆಯಿದೆ, ಇದರಲ್ಲಿ ಎಲ್ಲರ ಪ್ರಾತಿನಿಧ್ಯವೂ ಸೇರಿದೆ. ಇದೇ ವೇಳೆ ಜಿ4 ರಾಷ್ಟ್ರಗಳ ಪರವಾಗಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ನಾಲ್ಕು ದಶಕಗಳಿಂದ ಸಮಾನ ಪ್ರಾತಿನಿಧ್ಯವಿದ್ದರೂ ಕಾಂಕ್ರೀಟ್ ಕೆಲಸ ಮಾಡದಿರುವುದು ಅತೀವ ವೇದನೆಯ ಸಂಗತಿ. ನ್ಯಾಯಸಮ್ಮತತೆ ಮತ್ತು ಪರಿಣಾಮಕಾರಿತ್ವಕ್ಕೆ ಪ್ರಾತಿನಿಧ್ಯವು ಅನಿವಾರ್ಯ ಸ್ಥಿತಿಯಾಗಿದೆ ಎಂದು ಹೇಳಿದರು. ಭದ್ರತಾ ಮಂಡಳಿಯ ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಸುಧಾರಣೆಯಿಂದಾಗಿ ಪ್ರಾತಿನಿಧ್ಯದಲ್ಲಿ ಇಳಿಕೆ ಕಂಡುಬರುತ್ತಿದೆ ಎಂದು ಹೇಳಿದರು.
VIRAL NEWS : ‘ಸೋಶಿಯಲ್ ಮೀಡಿಯಾ’ದಲ್ಲಿ ಜನ ಮೆಚ್ಚುಗೆಗೆ ಪಾತ್ರವಾಯ್ತು ಸಚಿವ ‘ಕೋಟಾ ಶ್ರೀನಿವಾಸ್ ಪೂಜಾರಿ’ಯ ನಡೆ..!
BIGG NEWS : ವಜಾಗೊಂಡ ‘ಟ್ವಿಟರ್’ ಉದ್ಯೋಗಿಗಳಿಗೆ ಭರ್ಜರಿ ಆಫರ್ ; ತಮ್ಮ ಸಂಸ್ಥೆಗೆ Well Come ಎಂದ ‘Koo’ ಕೋ-ಫೌಂಡರ್