ಮೈಸೂರು : ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಹಾದೇಹ ನಗರದ ವಸತಿ ಶಾಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ವಸತಿ ಶಾಲೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಹಾದೇವ ನಗರದ ವಸತಿ ಶಾಲೆಯಲ್ಲಿ ಕುಡಿಯುವ ನೀರಿನ ಘಟಕದಲ್ಲಿ ವಿದ್ಯುತ್ ಪ್ರವಹಿಸಿ ಬಸವಣ್ಣ ಎಂಬುವರ 7 ವರ್ಷದ ಮಗ ಯುವೀನ್ ಸಾವನ್ನಪ್ಪಿದ್ದ ಬಾಲಕ ಎಂದು ಗುರುತಿಸಲಾಗಿದೆ.
ಮೊರಾರ್ಜಿ ವಸತಿ ಶಾಲೆಯಲ್ಲಿ ಬಸವಣ್ಣ ಕುಟುಂಬ ವಾಸವಾಗಿತ್ತು. ತಂದೆಯ ಜೊತೆಗೆ ನೀರು ತರಲು ಹೋಗಿದ್ದಾಗ ವಿದ್ಯುತ್ ಪ್ರವಹಿಸಿ ಯುವೀನ್ ಸಾವನ್ನಪ್ಪಿದ್ದಾನೆ. ನಂಜನಗೂಡು ಪೊಲೀಸ್ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.