ಬೆಂಗಳೂರು : ರಾಜ್ಯದಲ್ಲಿ ಜನಾಕ್ರೋಶಕ್ಕೆ ‘ಬೊಮ್ಮಾಯಿ ಮಾಡೆಲ್’ ವಿಪಳವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ಬಸವಣ್ಣನ ಮಾಡೆಲ್ ಇದೆ, ಕುವೆಂಪು ಮಾಡೆಲ್ ಇದೆ, ನಾರಾಯಣಗುರುಗಳ ಮಾಡೆಲ್ ಇದೆ, ದೇವರಾಜ್ ಅರಸರ ಮಾಡೆಲ್ ಇದೆ. ಇವುಗಳನ್ನು ಬಿಟ್ಟು ಯುಪಿ ಮಾಡೆಲ್ ತರುತ್ತೇವೆ ಎನ್ನುವ ಸಿಎಂ ಬೊಮ್ಮಾಯಿ ಅವರೇ, ಇದರರ್ಥ ಇಲ್ಲಿನ ಯುವಕರನ್ನು ಪರರಾಜ್ಯಗಳಿಗೆ ಪಾನಿಪುರಿ ಮಾರಲು ಕಳಿಸುವುದೇ? #JanaAkrosha ಕ್ಕೆ ‘ಬೊಮ್ಮಾಯಿ ಮಾಡೆಲ್’ ಛಿದ್ರವಾಯಿತೆ? ಎಂದು ವ್ಯಂಗ್ಯವಾಡಿದೆ.
ಕರ್ನಾಟಕದಲ್ಲಿ
ಬಸವಣ್ಣನ ಮಾಡೆಲ್ ಇದೆ, ಕುವೆಂಪು ಮಾಡೆಲ್ ಇದೆ, ನಾರಾಯಣಗುರುಗಳ ಮಾಡೆಲ್ ಇದೆ, ದೇವರಾಜ್ ಅರಸರ ಮಾಡೆಲ್ ಇದೆ.ಇವುಗಳನ್ನು ಬಿಟ್ಟು ಯುಪಿ ಮಾಡೆಲ್ ತರುತ್ತೇವೆ ಎನ್ನುವ @BSBommai ಅವರೇ,
ಇದರರ್ಥ ಇಲ್ಲಿನ ಯುವಕರನ್ನು ಪರರಾಜ್ಯಗಳಿಗೆ ಪಾನಿಪುರಿ ಮಾರಲು ಕಳಿಸುವುದೇ?!#JanaAkrosha ಕ್ಕೆ 'ಬೊಮ್ಮಾಯಿ ಮಾಡೆಲ್' ಛಿದ್ರವಾಯಿತೆ?— Karnataka Congress (@INCKarnataka) July 29, 2022
ಒಂದೇ ವಾರದಲ್ಲಿ ಕರಾವಳಿಯಲ್ಲಿ ಮೂರು ಕೊಲೆಗಳಾಗಿವೆ. ಮಸೂದ್, ಪ್ರವೀಣ್, ಫಾಜಿಲ್.ಈ ಕೊಲೆಗಳ ಕಾರಣ ಮುಂದೆ ತನಿಖೆಯಿಂದ ತಿಳಿಯಬೇಕಿದೆ. ಆಡಳಿತ ಮಾಡುವವರಿಗೆ ಧರ್ಮಗಳಿಗಿಂತ “ರಾಜಧರ್ಮ” ಮುಖ್ಯ. ರಾಜಧರ್ಮದ ಎದುರು ಸರ್ವಧರ್ಮವೂ ಸಮಾನ. ಸಿಎಂ ಬೊಮ್ಮಾಯಿ ಅವರೇ, ನಿಮಗೆ ರಾಜಧರ್ಮ ನೆನಪಿಸಲು ಮತ್ತೊಮ್ಮೆ ವಜಪೇಯಿಯವರೇ ಹುಟ್ಟಿಬರಬೇಕೆ? ಎಂದು ಪ್ರಶ್ನಿಸಿದೆ.
ಒಂದೇ ವಾರದಲ್ಲಿ ಕರಾವಳಿಯಲ್ಲಿ ಮೂರು ಕೊಲೆಗಳಾಗಿವೆ.
ಮಸೂದ್, ಪ್ರವೀಣ್, ಫಾಜಿಲ್…
ಈ ಕೊಲೆಗಳ ಕಾರಣ ಮುಂದೆ ತನಿಖೆಯಿಂದ ತಿಳಿಯಬೇಕಿದೆ.ಆಡಳಿತ ಮಾಡುವವರಿಗೆ ಧರ್ಮಗಳಿಗಿಂತ "ರಾಜಧರ್ಮ" ಮುಖ್ಯ. ರಾಜಧರ್ಮದ ಎದುರು ಸರ್ವಧರ್ಮವೂ ಸಮಾನ.@BSBommai ಅವರೇ, ನಿಮಗೆ ರಾಜಧರ್ಮ ನೆನಪಿಸಲು ಮತ್ತೊಮ್ಮೆ ವಜಪೇಯಿಯವರೇ ಹುಟ್ಟಿಬರಬೇಕೆ?#JanaAkrosha
— Karnataka Congress (@INCKarnataka) July 29, 2022