ಬೆಂಗಳೂರು : ಬಿಜೆಪಿ ಭ್ರಷ್ಟೋತ್ಸವ ಧಾರಾವಾಹಿಯು ದಿನಕ್ಕೊಂದು ಎಪಿಸೋಡ್ನಂತೆ ಹೊರಬರುತ್ತಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಭ್ರಷ್ಟೋತ್ಸವ ಧಾರಾವಾಹಿಯು ದಿನಕ್ಕೊಂದು ಎಪಿಸೋಡ್ನಂತೆ ಹೊರಬರುತ್ತಿದೆ. ಕೊಡಗಿನಲ್ಲಿ ಬಿಜೆಪಿಯ ಅಕ್ರಮದ ಮೊಟ್ಟೆ ಒಡೆದು ಭ್ರಷ್ಟಾಚಾರದ ‘ಮರಿ’ ಹೊರಬಂದಿದೆ. ಅಧಿಕಾರಿ ಲಂಚ ಪಡೆದು ಸಿಕ್ಕಿಬಿದ್ದರು, ಶಾಸಕ ಬೋಪಯ್ಯ ಆ ಅಧಿಕಾರಿಯಿಂದಲೇ ಲಂಚ ಪಡೆದರು, ಭ್ರಷ್ಟಾಚಾರದ ಆಟ ಚೆನ್ನಾಗಿದೆ. ಬಸವರಾಜ ಬೊಮ್ಮಾಯಿ ಅವರೇ ನಿಮ್ಮ ಪಾರದರ್ಶಕ ತನಿಖೆ ಯಾವಾಗ? ಎಂದು ಪ್ರಶ್ನಿಸಿದೆ.
ಗೃಹಸಚಿವ ಅರಗಜ್ಞಾನೇಂದ್ರ ಸೇರಿ ವಿವಿಐಪಿಗಳಿಗೆ BDA ನಿವೇಶನ ನೀಡಿಕೆ ಅಕ್ರಮ ಎಂದು ಸುಪ್ರೀಂ ಕೋರ್ಟ್ ಗುಡುಗಿದೆ. ಆಯುಕ್ತರಿಗೆ ವರ್ಗಾವಣೆ ಆದೇಶವಾಗಿದೆ. ಗೃಹ ಸಚಿವರಿಗೆ? ಅಭಿವೃದ್ಧಿಯಲ್ಲಿ ಬೆಂಗಳೂರನ್ನು ‘ಜಾಗತಿಕ ನಗರ’ ಮಾಡಬೇಕಿದ್ದ BDA, ಬಿಜೆಪಿ ಆಡಳಿತದಲ್ಲಿ ‘ಭ್ರಷ್ಟರ ಡೆವೆಲಪ್ಮೆಂಟ್ ಅಥಾರಿಟಿ’ ಆಗಿದೆ ಎಂದು ಹೇಳಿದೆ.
BIGG BREAKING NEWS : ತೀವ್ರ ಕುತೂಹಲ ಮೂಡಿಸಿದೆ ಕಾಂಗ್ರೆಸ್ ನಾಯಕ ಕೆ.ಹೆಚ್. ಮುನಿಯಪ್ಪ-ಸಚಿವ ಸುಧಾಕರ್ ಭೇಟಿ