ಬೆಂಗಳೂರು : ದೊಡ್ಡಬಳ್ಳಾಪುರದಲ್ಲಿ ಇಂದು ಬಿಜೆಪಿ ಜನಸ್ಪಂದನಾ ಸಮಾವೇಶ ಹಮ್ಮಿಕೊಂಡಿದ್ದು, ಬಿಜೆಪಿ ಜನಸ್ಪಂದನಾ ಸಮಾವೇಶದಲ್ಲಿ ಸರ್ಕಾರದ 40% ಕಮಿಷನ್ ಕುರಿತು ಹೇಳಿಕೊಳ್ಳಬೇಕಷ್ಟೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇರಳದಲ್ಲಿ ʻಓಣಂʼ ಸಂಭ್ರಮ: ಒಂದೇ ವಾರದಲ್ಲಿ 625 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ!
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಸೇರಿ ರಾಜ್ಯಾದ್ಯಂತ ಪ್ರವಾಹ ಪರಿಸ್ಥಿತಿ ಇದೆ. ಜನರ ಸಮಸ್ಯೆ ಕೇಳುವ ಬದಲು ಬಿಜೆಪಿ ಸರ್ಕಾರ ಜನಸ್ಪಂದನಾ ಸಮಾವೇಶ ಮಾಡುತ್ತಿದೆ. ಬಿಜೆಪಿ ಏನು ಸಾಧನೆ ಮಾಡಿದೆ ಹೇಳೋದಕ್ಕೆ? ಭ್ರಷ್ಟಾಚಾರ ಬಿಟ್ಟರೆ ಬಿಜೆಪಿ ಬೇರೆ ಏನು ಸಾಧನೆ ಮಾಡಿದೆ? ಸರ್ಕಾರದ 40% ಕಮಿಷನ್ ಕುರಿತು ಹೇಳಿಕೊಳ್ಳಬೇಕಷ್ಟೇ ಎಂದು ಎಂದು ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರ ಕಷ್ಟಕೊಳ್ಳಗಾಗಿರುವವರಿಗೆ ಸ್ಪಂದಿಸಬೇಕಲ್ವೆ? ಜನರ ಕಷ್ಟಸುಖ ಕೇಳದೇ ಜನಸ್ಪಂದನಾ ಮಾಡುತ್ತಿದ್ದಾರೆ.ಯಾವ ಸಚಿವರೂ ಜಿಲ್ಲೆಗಳಿಗೆ ಹೋಗಿ ಸಮಸ್ಯೆ ಕೇಳುತ್ತಿಲ್ಲ, ಜನರ ಕಷ್ಟ ಕೇಳದೇ ಜನಸ್ಪಂದನ ಮಾಡಿದ್ರೆ ಪ್ರಯೋಜನವಿಲ್ಲ. ಮಳೆ, ಪ್ರವಾಹದಿಂದ ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ.ದುಡ್ಡು ಖರ್ಚು ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಜನಸ್ಪಂದನಾ ರಾಜಕೀಯ ಪ್ರೇರಿತ ಕಾರ್ಯಕ್ರಮ ಎಂದು ಟೀಕಿಸಿದ್ದಾರೆ.