ಬೆಂಗಳೂರು : ಬೊಮ್ಮಾಯಿ ವಿರುದ್ಧದ ‘PayCM’ ಅಭಿಯಾನವನ್ನು ಲಿಂಗಾಯತ ವಿರೋಧಿ ಎಂಬಂತೆ ಬಿಂಬಿಸಿ ಬಿಜೆಪಿ ಸತ್ಯವನ್ನು ಡೈವರ್ಟ್ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘PayCM’ ಅಭಿಯಾನ ಬಸವರಾಜ ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರದ ಮುಖವಾಡ ಕಳಚುವ ಪೋಸ್ಟರ್ ಹೊರತು ಇದಕ್ಕೆ ಇನ್ನೇನೋ ಅರ್ಥ ಕಲ್ಪಿಸುವ ಅಗತ್ಯವಿಲ್ಲ. BJP ಯವರು ಈ ಅಭಿಯಾನವನ್ನು ಲಿಂಗಾಯತ ವಿರೋಧಿ ಎಂದು ಬ್ರ್ಯಾಂಡ್ ಮಾಡುತ್ತಿರುವುದು ಹತಾಶ ಮನಃಸ್ಥಿತಿಯ ಪ್ರತೀಕ. ‘PayCM’ ಅಭಿಯಾನ ಅದ್ಹೇಗೆ ಲಿಂಗಾಯತ ವಿರೋಧಿ ಆಗುತ್ತದೆ? BJPಯ ಲಾಜಿಕ್ ಏನು? ಎಂದು ಪ್ರಶ್ನಿಸಿದ್ದಾರೆ.
1
'PayCM' ಅಭಿಯಾನ @BSBommai ಸರ್ಕಾರದ ಭ್ರಷ್ಟಾಚಾರದ ಮುಖವಾಡ ಕಳಚುವ ಪೋಸ್ಟರ್ ಹೊರತು ಇದಕ್ಕೆ ಇನ್ನೇನೋ ಅರ್ಥ ಕಲ್ಪಿಸುವ ಅಗತ್ಯವಿಲ್ಲ.#BJP ಯವರು ಈ ಅಭಿಯಾನವನ್ನು ಲಿಂಗಾಯತ ವಿರೋಧಿ ಎಂದು ಬ್ರ್ಯಾಂಡ್ ಮಾಡುತ್ತಿರುವುದು ಹತಾಶ ಮನಃಸ್ಥಿತಿಯ ಪ್ರತೀಕ.'PayCM' ಅಭಿಯಾನ ಅದ್ಹೇಗೆ ಲಿಂಗಾಯತ ವಿರೋಧಿ ಆಗುತ್ತದೆ?
BJPಯ ಲಾಜಿಕ್ ಏನು?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 26, 2022
ಬೊಮ್ಮಾಯಿ ವಿರುದ್ಧದ ‘PayCM’ ಅಭಿಯಾನವನ್ನು ಲಿಂಗಾಯತ ವಿರೋಧಿ ಎಂಬಂತೆ ಬಿಂಬಿಸಿ BJP, ಸತ್ಯವನ್ನು ಡೈವರ್ಟ್ ಮಾಡುತ್ತಿದೆ. ಆದರೆ BJPಯವರಷ್ಟು ಲಿಂಗಾಯತ ವಿರೋಧಿಗಳು ಯಾರಿದ್ದಾರೆ? ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಯಡಿಯೂರಪ್ಪರನ್ನು CM ಪದವಿಯಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದ್ದು ಲಿಂಗಾಯತ ಸಮುದಾಯಕ್ಕೆ ಮಾಡಿದ ದ್ರೋಹವಲ್ಲವೆ? ಎಂದಿದ್ದಾರೆ.
2
ಬೊಮ್ಮಾಯಿ ವಿರುದ್ಧದ 'PayCM' ಅಭಿಯಾನವನ್ನು ಲಿಂಗಾಯತ ವಿರೋಧಿ ಎಂಬಂತೆ ಬಿಂಬಿಸಿ BJP, ಸತ್ಯವನ್ನು ಡೈವರ್ಟ್ ಮಾಡುತ್ತಿದೆ.ಆದರೆ BJPಯವರಷ್ಟು ಲಿಂಗಾಯತ ವಿರೋಧಿಗಳು ಯಾರಿದ್ದಾರೆ?
ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಯಡಿಯೂರಪ್ಪರನ್ನು CM ಪದವಿಯಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದ್ದು ಲಿಂಗಾಯತ ಸಮುದಾಯಕ್ಕೆ ಮಾಡಿದ ದ್ರೋಹವಲ್ಲವೆ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 26, 2022
ಬೊಮ್ಮಾಯಿ ಸರ್ಕಾರದ ಮೇಲಿರೋ ಭ್ರಷ್ಟಾಚಾರದ ಕಳಂಕದಿಂದ ಲಿಂಗಾಯತ ಮತಗಳು ಕೈ ತಪ್ಪಿ ಹೋಗುವ ಆತಂಕ BJPಯವರನ್ನು ಕಾಡುತ್ತಿದೆ. ಹಾಗಾಗಿ ಬೊಮ್ಮಾಯಿಯವರ ಲಿಂಗಾಯತ ಕಾರ್ಡ್ ಬಳಸಿ ಅನುಕಂಪ ಗಿಟ್ಟಿಸುವ ಕೀಳು ತಂತ್ರಕ್ಕೆ BJP ಮುಂದಾಗಿದೆ. ಭ್ರಷ್ಟಚಾರಿಗಳಿಗೆ ಯಾವುದೇ ಜಾತಿ-ಸಮೂದಾಯ ಇರುವುದಿಲ್ಲ. ಭ್ರಷ್ಟರದ್ದೇ ಒಂದು ಜಾತಿ. ಅದರ ಹೆಸರೇ BJP ಎಂದು ಕಿಡಿಕಾರಿದ್ದಾರೆ.
3
ಬೊಮ್ಮಾಯಿ ಸರ್ಕಾರದ ಮೇಲಿರೋ ಭ್ರಷ್ಟಾಚಾರದ ಕಳಂಕದಿಂದ ಲಿಂಗಾಯತ ಮತಗಳು ಕೈ ತಪ್ಪಿ ಹೋಗುವ ಆತಂಕ BJPಯವರನ್ನು ಕಾಡುತ್ತಿದೆ.ಹಾಗಾಗಿ ಬೊಮ್ಮಾಯಿಯವರ ಲಿಂಗಾಯತ ಕಾರ್ಡ್ ಬಳಸಿ ಅನುಕಂಪ ಗಿಟ್ಟಿಸುವ ಕೀಳು ತಂತ್ರಕ್ಕೆ BJP ಮುಂದಾಗಿದೆ.
ಭ್ರಷ್ಟಚಾರಿಗಳಿಗೆ ಯಾವುದೇ ಜಾತಿ-ಸಮೂದಾಯ ಇರುವುದಿಲ್ಲ. ಭ್ರಷ್ಟರದ್ದೇ ಒಂದು ಜಾತಿ.
ಅದರ ಹೆಸರೇ BJP.— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 26, 2022