ಬೆಂಗಳೂರು : ಬಿಜೆಪಿ ಸರ್ಕಾರ 40% ಕಮಿಷನ್ ಅನ್ನು 50% ಗೆ ಏರಿಸಿ ಭ್ರಷ್ಟಾಚಾರದಲ್ಲಿ ಪ್ರಮೋಷನ್ ಪಡೆದಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿ ಸರ್ಕಾರ 40% ಕಮಿಷನ್ ಅನ್ನು 50% ಗೆ ಏರಿಸಿ ಭ್ರಷ್ಟಾಚಾರದಲ್ಲಿ ಪ್ರಮೋಷನ್ ಪಡೆದಿದೆ. ಅತಿವೃಷ್ಟಿ,ಅನಾವೃಷ್ಟಿ,ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ರಾಜ್ಯಕ್ಕೆ ಆಡಳಿತದ ಬೂಸ್ಟಿಂಗ್ ಡೋಸ್ ನೀಡಬೇಕಾದ ಬಿಜೆಪಿ ಭ್ರಷ್ಟಾಚಾರದಲ್ಲಿ ಬೂಸ್ಟಿಂಗ್ ಡೋಸ್ ಪಡೆದಿದೆ. BBMP ಅನ್ನು ಹಗಲುದರೋಡೆಯ ಕೇಂದ್ರವಾಗಿಸಿದ್ದೆ ಸದ್ಯದ ಬಿಜೆಪಿಯ ಸಾಧನೆ ಎಂದು ಕಿಡಿಕಾರಿದ್ದಾರೆ.
Breaking news: ಗಣಿ ಗುತ್ತಿಗೆ ಪ್ರಕರಣ: ಜಾರ್ಖಂಡ್ ಸಿಎಂ ʻಹೇಮಂತ್ ಸೊರೆನ್ʼ ಅನರ್ಹತೆಗೆ ಚುನಾವಣಾ ಆಯೋಗ ಶಿಫಾರಸು
ರಾಜ್ಯದಲ್ಲಿ 40% ಕಮಿಷನ್ ಪೆಡಂಭೂತ ತಾಂಡವವಾಡುತಿದೆ. ಈ ಕಮಿಷನ್ ಭೂತಕ್ಕೆ ಬಲಿಯಾದ ಸಂತೋಷ್ ಪಾಟೀಲ್ ಪ್ರಧಾನಿಗೆ ಪತ್ರ ಬರೆದರೂ ಅದು ಪ್ರಧಾನಿ ಸಚಿವಾಲಯದ ಕಸದ ಬುಟ್ಟಿ ಸೇರಿತ್ತು.ಈಗ ಗುತ್ತಿಗೆದಾರರ ಸಂಘದ ಸರದಿ. ಈಗಲಾದರೂ ನಿಷ್ಪಕ್ಷಪಾತ ತನಿಖೆ ನಡೆಯಬಹುದೇ? ಆರೋಪಿತ ಸರ್ಕಾರದ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ.