ಚಿತ್ರದುರ್ಗ : ಮುರುಘಾಮಠದ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಇಬ್ಬರು ಬಾಲಕಿಯರಲ್ಲಿ ಒಬ್ಬರ ಚಿಕ್ಕಪ್ಪ, ಮಾಜಿ ಶಾಸಕ ಮತ್ತು ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಅವರು ಆಗಸ್ಟ್ 27 ರಂದು ಪೊಲೀಸರಿಗೆ ಸಂಬಂಧಿಸಿದ ಕಾಗದದಲ್ಲಿ ಸಹಿ ಮಾಡುವಂತೆ ಬಲವಂತಪಡಿಸಿದ್ದಾರೆ ಎಂದು ಆರೋಪಿಸಿ ಎಸ್ಪಿಗೆ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ಸಂತ್ರಸ್ತ ಬಾಲಕಿಯ ಚಿಕ್ಕಪ್ಪ ತಿಪ್ಪೇಸ್ವಾಮಿ,ಜುಲೈ 27ರಂದು ಬಸವರಾಜನ್ ನನ್ನನ್ನು ಕರೆಸಿಕೊಂಡಿದ್ದರು, ಆಗ ಮಕ್ಕಳು ಅವರ ಮನೆಯಲ್ಲಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅವರ ವಿದ್ಯಾಭ್ಯಾಸ, ಮದುವೆ ಜವಾಬ್ದಾರಿ ನನ್ನದು ಎಂದು ಬಸವರಾಜನ್ ಹೇಳಿದ್ರು. ಆದರೆ ನಾವು ಮಗಳನ್ನ ಮನೆಗೆ ಕರೆತಂದಿರೋ ಹೇಳಿಕೆ ಸುಳ್ಳು. ಬಾಲಕಿಯರ ಬಳಿ ಖಾಲಿ ಪೇಪರ್ಗೆ ಸಹಿ ಹಾಕಿಸಿದ್ದಾರೆ ಬಸವರಾಜನ್ ವಿರುದ್ಧ ಚಿತ್ರದುರ್ಗ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.
BIGG NEWS : ರಾಜ್ಯ ಸರ್ಕಾರದಿಂದ 53 ಹೊಸ ಯೋಜನೆಗಳಿಗೆ ಅನುಮೋದನೆ : 8619 ಉದ್ಯೋಗ ಸೃಷ್ಟಿ : ಸಚಿವ ಮುರುಗೇಶ್ ನಿರಾಣಿ