ಬೆಂಗಳೂರು : ಕೆಎಂಎಫ್ ನಂದಿನಿ ಹಾಲು ಹಾಗೂ ಮೊಸರು ದರ ಹೆಚ್ಚಳದ ಬಗ್ಗೆ ಇಂದು ಸಿಎಂ ಬಸವರಾಝ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದು, ಹಾಲಿನ ದರ ಪ್ರತಿ ಲೀ.ಗೆ 2 ರಿಂದ 3 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.
BIGG NEWS : `ಯಶಸ್ವಿನಿ ಯೋಜನೆ’ : ರೈತ ಸಮುದಾಯಕ್ಕೆ ಇಲ್ಲಿದೆ ಬಹುಮುಖ್ಯ ಮಾಹಿತಿ|Yashaswini Scheme
ಚರ್ಮ ಗಂಟು ರೋಗ, ಅತಿವೃಷ್ಟಿ ಸೇರಿದಂತೆ ಇತರೆ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿರುವಂತ ರೈತರಿಗೆ ನೆರವಾಗುವ ನಿಟ್ಟಿನಲ್ಲಿ, ಹಾಲು, ಮೊಸರಿನ ದರವನ್ನು ( Nandini Milk, Curd Price Hike ) ಪ್ರತಿ ಲೀಟರ್ ಗೆ 3 ರೂ ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ.
ಈ ಕುರಿತಂತೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (Karnataka Co-operative Milk Producers Federation- KMF ) ಮಾಹಿತಿ ಬಿಡುಗಡೆ ಮಾಡಿದ್ದು, ನಂದಿನಯ ಎಲ್ಲಾ ಮಾದರಿಯ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 3 ರೂ ಹೆಚ್ಚಳ ಮಾಡುವುದಾಗಿ ತಿಳಿಸಿತ್ತು.
ಸರ್ಕಾರ ಆಸಕ್ತಿ ತೋರದ ಹಿನ್ನೆಲೆಯಲ್ಲಿ ನವೆಂಬರ್ 14 ರಂದು ಹಾಲು ಹಾಗೂ ಮೊಸರಿನ ದರವನ್ನು 3 ರೂ.ಹೆಚ್ಚಳವಾಗಬೇಕಿತ್ತು. ಆದರೆ ಪರಿಷ್ಕೃತ ದರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಡೆ ನೀಡಿ ನವೆಂಬರ್ 20 ರ ಬಳಿಕ ಸಭೆ ನಡೆಸಿ ನಿರ್ಧರಿಸುವುದಾಗಿ ಪ್ರಕಟಿಸಿದ್ದರು. ಅದರಂತೆ ಇಂದು ಸಂಜೆ ಸಭೆ ನಿಗದಿಯಾಗಿದೆ.