ಬೆಂಗಳೂರು : ಕ್ರಿಸ್ ಮಸ್, ಹೊಸ ವರ್ಷದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳಲ್ಲಿ ಪ್ರವಾಸಕ್ಕೆ ತೆರಳುವವರಿಗೆ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಶಾಕ್ ಎದುರಾಗಿದ್ದು, ಖಾಸಗಿ ಬಸ್ ಗಳ ಟಿಕೆಟ್ ದರ ಭಾರೀ ಹೆಚ್ಚಳ ಮಾಡಲಾಗಿದೆ.
BIGG NEWS : ಕೊರೊನಾ ಆತಂಕ : ಇಂದು ರಾಜ್ಯ ಸರ್ಕಾರದಿಂದ ಮಹತ್ವದ ಸಭೆ, ಹೊಸ ಮಾರ್ಗಸೂಚಿ ಬಿಡುಗಡೆ?
ಕ್ರಿಸ್ ಮಸ್ ಪ್ರಯುಕ್ತ ಸಾಲು ಸಾಲು ರಜೆಗಳಿದ್ದು, ಖಾಸಗಿ ಬಸ್ ಗಳಲ್ಲಿ ಹೊರ ಊರುಗಳಿಗೆ ತೆರಳುವವರಿಗೆ ಖಾಸಗಿ ಬಸ್ ಮಾಲೀಕರು ಬಿಗ್ ಶಾಕ್ ನೀಡಿದ್ದು, ಖಾಸಗಿ ಬಸ್ ಟಿಕೆಟ್ ದರ ಮೂರರಿಂದ ನಾಲ್ಕು ಪಟ್ಟು ಹೆಚ್ಚಳ ಮಾಡಲಾಗಿದೆ. ಕ್ರಿಸ್ ಮಸ್ ರಜೆಗೆ ಕೇರಳ, ಗೋವಾ, ಆಂಧ್ರಪ್ರದೇಶ ಸೇರಿ ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ ಬೇಡಿಕೆ ಇರುವ ಮಾರ್ಗದಲ್ಲೇ ಪ್ರಯಾಣ ದರ ಹೆಚ್ಚಿಸಲಾಗಿದೆ.
BIGG NEWS : 25,000 ವಿದ್ಯಾರ್ಥಿಗಳ ನೆಲೆ ‘ಸ್ವಾಮಿ ನಾರಾಯಣ ಗುರುಕುಲ’ ಅಮೃತ ಮಹೋತ್ಸವ, ‘ಪ್ರಧಾನಿ ಮೋದಿ’ ಭಾಷಣ
ಬೆಂಗಳೂರಿನಿಂದ ಹುಬ್ಬಳ್ಳಿ, ಬೆಳಗಾವಿಗೆ ತೆರಳುವ ಪ್ರಯಾಣಕರಿಗೆ ಗರಿಷ್ಠ ದರ 5,000 ರೂ. ಇದ್ದರೆ ಗೋವಾಕ್ಕೆ 7 ಸಾವಿರ ರೂ. ಎರ್ನಾಕುಲಂಗೆ 7 ಸಾವಿರ ರೂ. ಮಂಗಳೂರಿಗೆ 3,500 ರೂ. ಮೈಸೂರಿಗೆ 5000 ರೂ. ಮಡಿಕೇರಿಗೆ 1,600 ರೂ. ಹುಬ್ಬಳ್ಳಿ ಮತ್ತು ಬೆಳಗಾವಿಗೆ ಡಿಸೆಂಬರ್ 25 ರಂದು ಪ್ರಯಾಣ ಮಾಡಲು ಟಿಕೆಟ್ ಕಾಯ್ದಿರಿಸಲು ಬಯಸಿದಿರೆ 8 ಸಾವಿರ ರೂ. ದರ ನಿಗದಿಯಾಗಿದೆ.
BIGG NEWS : ಸಾಮಾಜಿಕ ಭದ್ರತೆ ಯೋಜನೆಗಳಡಿ ಮಾಸಾಶನ ಪಡೆಯುತ್ತಿರುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ