ನವದೆಹಲಿ : ಆರ್ ಬಿಐ ರೆಪೊ ದರ ಏರಿಕೆಯ ಬೆನ್ನಲ್ಲೇ ಬ್ಯಾಂಕ್ ಗಳು ಗ್ರಾಹಕರಿಗೆ ಬಿಗ್ ಶಾಕ್ ನೀಡಿದ್ದು, ಐಸಿಐಸಿಐ ಮತ್ತು ಪಿಎನ್ಬಿ ಬ್ಯಾಂಕ್ ತಮ್ಮ ಸಾಲದ ಬಡ್ಡಿ ದರಗಳನ್ನು ಹೆಚ್ಚಿಸಿವೆ.
BIGG BREAKING NEWS : ಚಾಮರಾಜಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ ಸ್ವತ್ತು : `BBMP’ ಘೋಷಣೆ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ರೆಪೊ ದರವನ್ನು 0.50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಹೊಸ ರೆಪೊ ದರ ಶೇ.5.40ರಷ್ಟಿದೆ. ಆರ್ ಬಿಐ ಕ್ರಮದಿಂದ ಸಾಲಗಳು ದುಬಾರಿಯಾಗಿವೆ. ಐಸಿಐಸಿಐ ಬ್ಯಾಂಕ್ ತನ್ನ ಬಾಹ್ಯ ಬೆಂಚ್ ಮಾರ್ಕ್ ಸಾಲ ಶ್ರೇಣಿಯನ್ನು (ಐ-ಇಎಲ್ಬಿಆರ್) 9.10% ಕ್ಕೆ ಹೆಚ್ಚಿಸಿದೆ. ಹೊಸ ಸಾಲದ ದರವು ಆಗಸ್ಟ್ 5 ರಿಂದ ಜಾರಿಗೆ ಬಂದಿದೆ.
Shocking news : ಬೆಂಗಳೂರಿನಲ್ಲಿ ಹಸುಗಳ ಜೊತೆ ವಿಕೃತಿ ಮೆರೆದಿದ್ದ ಸೈಕೋಪಾಥ್ ಅರೆಸ್ಟ್!
ಅದೇ ರೀತಿ, ಪಿಎನ್ ಬಿ ತನ್ನ ರೆಪೊ-ಲಿಂಕ್ಡ್ ಸಾಲ ದರವನ್ನು (ಆರ್ಎಲ್ಎಲ್ಆರ್) 7.40 ರಿಂದ 7.90 ಕ್ಕೆ ಹೆಚ್ಚಿಸಿದೆ. ಹೊಸ ದರವು ಆಗಸ್ಟ್ 8 ರಿಂದ ಜಾರಿಗೆ ಬರಲಿದೆ. ಆರ್ ಬಿಐ ರೆಪೊ ದರವನ್ನು ಹೆಚ್ಚಿಸಿದ ನಂತರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸಾಲಗಳನ್ನು ದುಬಾರಿಯಾಗಿವೆ.
BIGG BREAKING NEWS : ಇತಿಹಾಸ ನಿರ್ಮಿಸಿದ ‘ ISRO’: ಮಕ್ಕಳೇ ತಯಾರಿಸಿದ ‘ಆಜಾದಿ ಸ್ಯಾಟ್’ ಉಪಗ್ರಹ ಉಡಾವಣೆ
ಆರ್ ಬಿಐ ಹಣಕಾಸು ನೀತಿಯು ರೆಪೋ ದರವನ್ನು ಹೆಚ್ಚಿಸಿದ್ದು, ಇದು ಮೇ ತಿಂಗಳಿನಿಂದ ಸತತ ಮೂರನೇ ಹೆಚ್ಚಳವಾಗಿದೆ. ದುರ್ಬಲ ಆರ್ಥಿಕ ಪರಿಸ್ಥಿತಿ, ಹೆಚ್ಚಿನ ಹಣದುಬ್ಬರ ಮತ್ತು ಕುಸಿಯುತ್ತಿರುವ ರೂಪಾಯಿಯ ವಿರುದ್ಧ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಮೊದಲೇ ಹೇಳಿದಂತೆ, ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ರೂಪಾಯಿಯನ್ನು ಸ್ಥಿರಗೊಳಿಸಲು ಕೋವಿಡ್ -19 ರ ನಂತರದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ತೆಗೆದುಕೊಂಡ ಹಣಕಾಸು ನೀತಿಯ ನಿಲುವನ್ನು ಆರ್ ಬಿಐ ಕೈಬಿಟ್ಟಿದೆ.