ಹೈದರಾಬಾದ್ : ಗುಲಾಮ್ ನಬಿ ಅಜಾದ್ ರಾಜೀನಾಮೆ ಬಳಿಕ ಕಾಂಗ್ರೆಸ್ ಗೆ ಮತ್ತೊಬ್ಬ ಹಿರಿಯ ನಾಯಕ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಗೆ ಮತ್ತೊಂದು ಶಾಕ್ ಎದುರಾಗಿದೆ.
BIGG NEWS : ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಭಾರೀ ಪ್ಲ್ಯಾನ್ : ಗಣೇಶ ಮೂರ್ತಿ ಕೂರಿಸಲು 3 ರೀತಿ ಪ್ರದೇಶಗಳ ಗುರುತು
ತೆಲಂಗಾಣದ ಕಾಂಗ್ರೆಸ್ ಪಕ್ಷದ ನಾಯಕ, ರಾಜಸಭೆಯ ಮಾಜಿ ಸದಸ್ಯರಾಗಿರುವ ಎಂ.ಎಂ.ಖಾನ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಜನರ ಮನ ಗೆಲ್ಲುವಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸಂಪೂರ್ಣ ವಿಫಲವಾಗಿದ್ದು, ತನ್ನ ಗತ ವೈಭವವನ್ನು ಮರಳಿ ಪಡೆದು ದೇಶವನ್ನು ಮುನ್ನಡೆಸಬಲ್ಲದು ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯಾವುದೇ ಪ್ರಯತ್ನ ಮಾಡದೇ ಹಿರಿಯ ಮುಖಂಡರು ಕಾಂಗ್ರೆಸ್ ಗೆ ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣ ಮಾಡಲಾಯಿತು. ಪಕ್ಷದ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳುವುದು ಹೊರತಾಗಿ ಅನ್ಯ ಮಾರ್ಗ ನನಗೆ ಉಳಿದಿಲ್ಲ ಎಂದು ಹೇಳಿದ್ದಾರೆ.