ಬೆಂಗಳೂರು : ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಜುಲೈ 28 ಕ್ಕೆ ಒಂದು ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಸಾಧನಾ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.
BIGG NEWS : ನಾಳೆಯಿಂದ `NEET’ ಪರೀಕ್ಷೆ : ಅಭ್ಯರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜುಲೈ 28ಕ್ಕೆ ಸಿಎಂ ಪಟ್ಟಕ್ಕೆ ಏರಿ ಒಂದು ವರ್ಷ ಕಳೆಯುತ್ತದೆ. ಈ ಹಿನ್ನೆಲೆ ಜು.28ಕ್ಕೆ ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಾಧನಾ ಸಮಾವೇಶ ನಡೆಯಲಿದ್ದು, 1 ವರ್ಷದ ಸ್ವಚ್ಛ ಆಡಳಿತ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
BREAKING NEWS: ಕಾವೇರಿ ನದಿ ಭೋರ್ಗರೆತ..! ಪಶ್ಚಿಮ ವಾಹಿನಿ ಮುಳುಗಡೆ; ಅಸ್ತಿ ಪಿಂಡ ಪ್ರದಾನ ಸ್ಥಗಿತ
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆಗಸ್ಟ್ 3ರಂದು ಸಿದ್ಧರಾಮೋತ್ಸವ ಕಾರ್ಯಕ್ರಮ ನಡೆಸುತ್ತಿರುವ ಪ್ರತಿಕ್ರಿಯೆ ನೀಡಿದ ಸಚಿವ ಡಾ.ಕೆ.ಸುಧಾಕರ್, ಬಿಜೆಪಿ ಪಕ್ಷದಲ್ಲಿ ವ್ಯಕ್ತಿ ಪೂಜೆ, ಪಲ್ಲಕ್ಕಿ ಉತ್ಸವ ಇಲ್ಲ. ಬಿಜೆಪಿಯಲ್ಲಿ ದೇಶ ಮೊದಲು, ಪಕ್ಷ ಎರಡನೆಯದ್ದು, ಕೊನೆಗೆ ತಾನು. ಆದರೆ ಕಾಂಗ್ರೆಸ್ನಲ್ಲಿ ವ್ಯಕ್ತಿ ಪೂಜೆ ಮಾಡುವುದಕ್ಕೆ ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
BIGG NEWS :ಸರ್ಕಾರಿ ಕಚೇರಿಗಳಲ್ಲಿ ಫೋಟೋ/ವಿಡಿಯೋ ನಿಷೇಧ ವಾಪಸ್ : ಆದೇಶ ಹಿಂಪಡೆದ ಪತ್ರದಲ್ಲಿ ಕನ್ನಡದ ಕಗ್ಗೊಲೆ!