ಬಾಂಗ್ಲಾದೇಶ : ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಧರ್ಮಾಂಧತೆಯ ಮೀಟರ್ ನಿರಂತರವಾಗಿ ಹೆಚ್ಚುತ್ತಿದ್ದು, ಈ ಮೊದಲು ಬಾಂಗ್ಲಾದಲ್ಲಿ ಹಿಂದೂ ದೇವತೆಗಳ ದೇವಾಲಯಗಳನ್ನ ನಾಶಪಡಿಸಲಾಯಿತು. ಬಲವಂತವಾಗಿ ಮತಾಂತರ ಮಾಡಲಾಗುತ್ತಿದ್ದು, ಈಗ ಹಿಂದೂ ಕ್ರಿಕೆಟಿಗ ಲಿಟ್ಟನ್ ದಾಸ್ ಬಾಂಗ್ಲಾದೇಶದಲ್ಲಿ ದುರ್ಗಾಪೂಜೆಗೆ ಶುಭಹಾರೈಸಿದಾಗ ಮೂಲಭೂತವಾದಿಗಳು ಬೆದರಿಸಿ ಮತಾಂತರಕ್ಕೆ ಒತ್ತಡ ಹೇರುತ್ತಿದ್ದಾರೆ.
ನವರಾತ್ರಿಯ ಮೊದಲು ಮಹಾಲಯದ ಸಂದರ್ಭದಲ್ಲಿ ಕ್ರಿಕೆಟಿಗ ಲಿಟನ್ ದಾಸ್ ತಮ್ಮ ಇನ್ಸ್ಟಾಗ್ರಾಮ್ ಪೇಜ್್ನಲ್ಲಿ ಪೋಸ್ಟ್ ಮಾಡುವ ಮೂಲಕ ನವರಾತ್ರಿಗೆ ಶುಭಾಶಯ ಕೋರಿದ್ದಾರೆ. ಆ ನಂತರ ಲಿಟನ್ ಬಾಂಗ್ಲಾದೇಶದ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವ್ರು ಕ್ರಿಕೆಟಿಗನ ಹಿಂದೂ ಧಾರ್ಮಿಕ ನಂಬಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದು, ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಡ ಹೇರುತ್ತಿದ್ದಾರೆ. ಇನ್ನು ಮತಾಂಧರು ಪೋಸ್ಟ್ನಲ್ಲಿ ಸಾಕಷ್ಟು ಅಸಂಬದ್ಧವಾಗಿ ಬರೆದಿದ್ದಾರೆ. ಬಾಂಗ್ಲಾದೇಶದ ಮತಾಂಧರು ಕ್ರಿಕೆಟಿಗ ಲಿಟನ್ ದಾಸ್ ಅವ್ರ ಹಿಂದೂ ಧಾರ್ಮಿಕ ನಂಬಿಕೆಗಳನ್ನ ದೂಷಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಇದು ಮೊದಲ ಘಟನೆಯಲ್ಲ. ಇದಕ್ಕೂ ಮುನ್ನ ಉಗ್ರರು ಹಿಂದೂ ಸಮುದಾಯವನ್ನ ಗುರಿಯಾಗಿಸಿಕೊಂಡು ವಿಗ್ರಹಗಳನ್ನ ಭಗ್ನಗೊಳಿಸಿದ್ದು, ದೇವಾಲಯಗಳನ್ನ ಗುರಿಯಾಗಿಸಲಾಯಿತು. ಆದ್ರೆ, ಬಾಂಗ್ಲಾದೇಶದ ಶೇಖ್ ಹಸೀನಾ ಸರ್ಕಾರವು ಅದನ್ನ ತಡೆಯಲು ಅಥವಾ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇಸ್ಲಾಮಿಕ್ ಮೂಲಭೂತವಾದಿಗಳನ್ನ ಕುಟುಕುತ್ತಿದೆ ಲಿಟನ್ ದಾಸ್ ಪೋಸ್ಟ್
ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ, ಬಾಂಗ್ಲಾದೇಶದ ಬ್ಯಾಟ್ಸ್ಮನ್ ದುರ್ಗಾ ದೇವಿಯ ವಿಗ್ರಹದ ಚಿತ್ರವನ್ನ ಹಂಚಿಕೊಂಡಿದ್ದಾರೆ ಮತ್ತು “ಸುಭೋ ಮಹಾಲಯ! ಮಾ ದುರ್ಗಾ ಬರುತ್ತಿದ್ದಾರೆ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಶೀಘ್ರದಲ್ಲೇ, ಮತಾಂಧರು ಅವ್ರ ಟೈಮ್ಲೈನ್ನಲ್ಲಿ ಬಂದು ಹಿಂದೂ ಧರ್ಮದ ಅನುಯಾಯಿ ಎಂದು ಲಿಟನ್ ದಾಸ್ ನಿಂದಿಸಲು ಪ್ರಾರಂಭಿಸಿದರು. ವಾಸ್ತವವಾಗಿ, ಹಿಂದೂ ನಂಬಿಕೆಗಳ ಪ್ರಕಾರ, ಮಹಾಲಯವು ಕೈಲಾಸ ಪರ್ವತದಿಂದ ಭೂಮಿಯ ಮೇಲೆ ದೇವಿ ದುರ್ಗಾ ಆಗಮನವನ್ನ ಸಂಕೇತಿಸುತ್ತದೆ. ಅವ್ರ ಪೋಸ್ಟ್ನಲ್ಲಿ, ಮೂಲಭೂತವಾದಿಗಳು ವಿಗ್ರಹ ಪೂಜೆಯನ್ನ ಖಂಡಿಸಿದರು. ಇದರೊಂದಿಗೆ, ಮೂಲಭೂತವಾದಿಗಳು ಲಿಟನ್ ದಾಸ್ಗೆ ‘ಒಂದು ನಿಜವಾದ ನಂಬಿಕೆ’ ಅಂದರೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಬೆದರಿಕೆ ಹಾಕುತ್ತಿದ್ದಾರೆ.