ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತ ಕ್ರಿಕಟ್ ತಂಡ (Team India) ಟಿ20 ವಿಶ್ವಕಪ್ಗೂ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನ ಆಡಲಿದೆ. ಮೊದಲ ಅಭ್ಯಾಸ ಪಂದ್ಯ ಸೋಮವಾರ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಏತನ್ಮಧ್ಯೆ ಈ ಪಂದ್ಯಕ್ಕಾಗಿ ಎರಡೂ ತಂಡಗಳು ಬ್ರಿಸ್ಬೇನ್ ತಲುಪಿದ್ದು, ಬ್ರಿಸ್ಬೇನ್’ನಲ್ಲಿ ಟೀಂ ಇಂಡಿಯಾಗೆ ನೀಡಿರುವ ಸೌಲಭ್ಯಗಳನ್ನ ನೋಡಿದ್ರೆ ಆಸ್ಟ್ರೇಲಿಯಾ ತಂಡ ಉದ್ದೇಶಪೂರ್ವಕವಾಗಿ ಭಾರತದೊಂದಿಗೆ ಅನುಚಿತವಾಗಿ ವರ್ತಿಸುತ್ತಿದೆಯೇ..? ಹೀಗೊಂದು ಪ್ರಶ್ನೆ ಎದ್ದಿದೆ. ಯಾಕಂದ್ರೆ, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಬ್ರಿಸ್ಬೇನ್ನಲ್ಲಿ ತಂಗಿದ್ದು, ಭಾರತಕ್ಕೆ ಈ ಬಾರಿ 4 ಸ್ಟಾರ್ ಹೋಟೆಲ್ ಸಿಕ್ಕಿದೆ. ಆದ್ರೆ ಆತಿಥೇಯ ಆಸ್ಟ್ರೇಲಿಯಾ ತಂಡವು 5 ಸ್ಟಾರ್ ಹೋಟೆಲ್ನಲ್ಲಿ ತಂಗಿದೆ. ವರದಿಗಳಿಂದ ಹೊರಬಿದ್ದಿರುವ ಮಾಹಿತಿಯಿಂದ ಭಾರತ ತಂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅಂಶವೂ ಹೊರಬಿದ್ದಿದೆ.
ವಿಶ್ವಕಪ್ನಂತಹ ಅದ್ಧೂರಿ ಪಂದ್ಯಾವಳಿಯ ಸಂದರ್ಭದಲ್ಲಿ, ತಂಡಗಳ ವಾಸ್ತವ್ಯದ ವ್ಯವಸ್ಥೆಯನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮತ್ತು ಪಂದ್ಯಾವಳಿಯನ್ನ ಆಯೋಜಿಸುವ ದೇಶದ ಕ್ರಿಕೆಟ್ ಮಂಡಳಿಯು ಮಾಡಲಾಗುತ್ತದೆ. ಹೀಗಾಗಿ ಭೇಟಿ ನೀಡುವ ತಂಡಕ್ಕೆ ಆತಿಥೇಯ ತಂಡ ಹೆಚ್ಚು ಉತ್ತಮ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಿದೆ ಎಂದು ಭಾವಿಸಲಾಗಿದೆ. ಆದ್ರೆ, ಆಸ್ಟ್ರೇಲಿಯಾಕ್ಕೆ ಹೋಲಿಸಿದ್ರೆ ಭಾರತ ತಂಡಕ್ಕೆ ಕಡಿಮೆ ಗುಣಮಟ್ಟದ ಹೋಟೆಲ್ ನೀಡಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತೋರಿಸಿದೆ. ಈ ಬಗ್ಗೆ ಬೇಸರಗೊಂಡು ಹಲವರು ಟ್ವೀಟ್ ಕೂಡ ಮಾಡಿದ್ದಾರೆ.
ಟಿ20 ವಿಶ್ವಕಪ್ ಯಾವ ನಗರಗಳಲ್ಲಿ ನಡೆಯಲಿದೆ?
ಮುಂಬರುವ ಐಸಿಸಿ ಟಿ20 ವಿಶ್ವಕಪ್ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ಒಟ್ಟು 46 ಪಂದ್ಯಗಳು ನಡೆಯಲಿವೆ. ಈ ಎಲ್ಲಾ ಪಂದ್ಯಗಳು ಆಸ್ಟ್ರೇಲಿಯಾದ ಅಡಿಲೇಡ್, ಬ್ರಿಸ್ಬೇನ್, ಜಿಲಾಂಗ್, ಹೊಬಾರ್ಟ್, ಮೆಲ್ಬೋರ್ನ್, ಪರ್ತ್ ಮತ್ತು ಸಿಡ್ನಿ ಎಂಬ ಏಳು ನಗರಗಳಲ್ಲಿ ನಡೆಯಲಿವೆ. ಸೆಮಿಫೈನಲ್ ಪಂದ್ಯಗಳು ನವೆಂಬರ್ 9 ಮತ್ತು 10 ರಂದು ಸಿಡ್ನಿ ಕ್ರಿಕೆಟ್ ಮೈದಾನ ಮತ್ತು ಅಡಿಲೇಡ್ನಲ್ಲಿ ನಡೆಯಲಿವೆ. ಹೀಗಾಗಿ ಫೈನಲ್ ಪಂದ್ಯ ನವೆಂಬರ್ 13ರಂದು ಮೆಲ್ಬೋರ್ನ್ನಲ್ಲಿ ನಡೆಯಲಿದೆ.
ಟಿ20 ವಿಶ್ವಕಪ್ನಲ್ಲಿ 16 ತಂಡಗಳು ಮುಖಾಮುಖಿಯಾಗಲಿವೆ
ಟಿ20 ವಿಶ್ವಕಪ್ನಲ್ಲಿ ಒಟ್ಟು 16 ತಂಡಗಳು ಸ್ಪರ್ಧಿಸಲಿವೆ. ಇದರಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನಮೀಬಿಯಾ, ಸ್ಕಾಟ್ಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್, ಐರ್ಲೆಂಡ್, ಯುಎಇ, ನೆದರ್ಲ್ಯಾಂಡ್ಸ್ ಮತ್ತು ಜಿಂಬಾಬ್ವೆ ತಂಡಗಳು ಸೇರಿವೆ. ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಸೂಪರ್ 12ಗೆ ಅರ್ಹತೆ ಪಡೆದಿವೆ.