ನವದೆಹಲಿ : ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಭಾರತದ ವಿರುದ್ಧ ಬಹಿರಂಗವಾಗಿ ಮುಸ್ಲಿಂರನ್ನ ಎತ್ತಿ ಕಟ್ಟುವ ಕೆಲಸ ಮಾಡಿದೆ. “ಭಾರತದಲ್ಲಿ ಇಸ್ಲಾಂ ಧರ್ಮವನ್ನು ರಕ್ಷಿಸಲು ಎಲ್ಲಾ ಮುಸ್ಲಿಮರು ಒಗ್ಗೂಡಿ ಭಾರತದ ಮೇಲೆ ದಾಳಿ ನಡೆಸುವಂತೆ ಐಎಸ್ ಪ್ರಚೋದಿಸಿದೆ. ಮುಂದುವರೆದು ಈ ಮನವಿಯ ಉದ್ದೇಶ ಹೇಳಿದ ಐಎಸ್, ಭಾರತ ಸರ್ಕಾರ ನಿರಂತರವಾಗಿ ಇಸ್ಲಾಂ ಧರ್ಮವನ್ನ ಗುರಿಯಾಗಿಸುತ್ತಿದೆ ಎಂದಿದೆ.
ಇನ್ನು ಈ ಎಲ್ಲಾ ವಿಷಯಗಳನ್ನ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ವಕ್ತಾರ ಅಬು ಉಮರ್-ಉಲ್-ಮುಜಾಹಿರ್ ಹೇಳಿದ್ದು, ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸುವಂತೆ ಮುಸ್ಲಿಮರಿಗೆ ಬಹಿರಂಗವಾಗಿ ಮನವಿ ಮಾಡಿದ್ದಾನೆ. ಭಾರತದ ವಿರುದ್ಧ ಜಂಟಿ ದಾಳಿ ನಡೆಸಬೇಕು ಎಂದಿದ್ದಾನೆ. ಅದ್ರಂತೆ, ಐಎಸ್ ವಕ್ತಾರ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಮುಸ್ಲಿಮರಿಗೆ ಒಗ್ಗೂಡುವಂತೆ ಪ್ರಚೋದಿಸಿದ್ದಾರೆ.
ಭಾರತದ ಮೇಲೆ ದಾಳಿ ಮಾಡಲು ಒಗ್ಗೂಡಿ
“ಭಾರತದ ವಿರುದ್ಧ ಜಂಟಿ ದಾಳಿ ನಡೆಸಬೇಕು. ಭಾರತದಲ್ಲಿ ಇಸ್ಲಾಂ ಧರ್ಮವನ್ನು ರಕ್ಷಿಸುವುದು ಇಸ್ಲಾಮಿಕ್ ಸ್ಟೇಟ್ನ ಉದ್ದೇಶವಾಗಿದೆ. ಏಕೆಂದರೆ ಅಲ್ಲಿ ಇಸ್ಲಾಂ ನಿರಂತರವಾಗಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದೆ” ಎಂದಿದೆ.
‘ಮುಸ್ಲಿಮರಿಗೆ ಹೋರಾಡುವ ಶಕ್ತಿ ಇಲ್ಲ’
ಮುಜಾಹಿರ್ ಭಯದಿಂದಾಗಿ ಮುಸ್ಲಿಮರಲ್ಲಿ ತಮ್ಮ ಧರ್ಮವನ್ನ ರಕ್ಷಿಸುವ ಮನೋಭಾವ ಕೊನೆಗೊಂಡಿದೆ ಎಂದು ಹೇಳಿದ್ದು, ಇನ್ನು ಮುಂದೆ ತಮ್ಮ ಶತ್ರುವಿನ ವಿರುದ್ಧವೂ ಹೋರಾಡುವ ಶಕ್ತಿ ಅವರಿಗಿಲ್ಲ ಎಂದಿದ್ದಾನೆ. ಇನ್ನು ಮುಜಾಹಿರ್, ಅರೇಬಿಕ್ ಭಾಷೆಯಲ್ಲಿ 32 ನಿಮಿಷಗಳ ಈ ಭಾಷಣವನ್ನ ಬಿಡುಗಡೆ ಮಾಡಿದ್ದು, ಭಾರತದ ಮುಸ್ಲಿಮರನ್ನು ದೇಶದ ಮೇಲೆ ದಾಳಿ ಮಾಡಲು ಪ್ರಚೋದಿಸಿದ್ದಾನೆ.
ತಾಲಿಬಾನ್ ಕೂಡ ಗುರಿಯಾಗಿದೆ.!
ಪಾಕಿಸ್ತಾನ, ಬಾಂಗ್ಲಾದೇಶ, ಫಿಲಿಪೈನ್ಸ್, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಸಿಂಗಾಪುರದಲ್ಲಿ ನೆಲೆಸಿರುವ ಮುಸ್ಲಿಮರನ್ನ ಹೊರತುಪಡಿಸಿ ಭಾರತದ ಮುಸ್ಲಿಮರು ಒಟ್ಟಾಗಿ ಭಾರತದ ಮೇಲೆ ದಾಳಿ ನಡೆಸುವಂತೆ ಮುಜಾಹಿರ್ ವಿಡಿಯೋದಲ್ಲಿ ಮನವಿ ಮಾಡಿದ್ದಾನೆ. ಅಬುಜಾ, ನೈಜೀರಿಯಾ ಮತ್ತು ಕಾಂಗೋ ಜೈಲಿನಲ್ಲಿರುವ ಭಯೋತ್ಪಾದಕರನ್ನ ಮುಕ್ತಗೊಳಿಸಲು ದಾಳಿ ನಡೆಸಿದ ಭಯೋತ್ಪಾದಕ ಸಂಘಟನೆಯ ಘಟಕಗಳನ್ನ ಅಲ್ ಮುಜಾಹಿರ್ ಶ್ಲಾಘಿಸಿದ್ದಾನೆ. ಇನ್ನು ಇರಾಕ್ ಮತ್ತು ಸಿರಿಯಾದಲ್ಲಿ ಹೆಚ್ಚಿನ ಸಂಖ್ಯೆಯ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಜೈಲಿನಲ್ಲಿದ್ದಾರೆ. ಅವರಲ್ಲಿ ಅನೇಕ ಭಾರತೀಯರೂ ಇದ್ದಾರೆ. ಆದರೆ, ಮುಜಾಹಿರ್ ತನ್ನ ಭಾಷಣದಲ್ಲಿ ತಾಲಿಬಾನ್ಗಳನ್ನ ಗುರಿಯಾಗಿಸಿಕೊಂಡಿದ್ದಾನೆ.