ಬೆಂಗಳೂರು: ನಾಳೆಯಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಸರ್ಕಾರ ಹಾಗೂ ಪ್ರತಿಪಕ್ಷಗಳ ಮಧ್ಯೆ ಜಂಗೀಕುಸ್ತಿ ಶುರುವಾಗಲಿದೆ. 40 ಪರ್ಸೆಂಟ್ ಕಮಿಷನ್, ಬೆಂಗಳೂರಿನ ಮಳೆ ವಿಚಾರಗಳು ಪ್ರತಿಧ್ವನಿಸುವ ಸಾಧ್ಯತೆ ಇದೆ.
ವಿರೋಧ ಪಕ್ಷಕ್ಕೆ ಆಹಾರವಾಗದಂತೆ ಆಡಳಿತರೂಢ ಬಿಜೆಪಿ ಪ್ಲಾನ್ ರೂಪಿಸಿಕೊಂಡಿದೆ. ಇನ್ನೊಂದೆಡೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಸಿದ್ಧವಾಗಿದೆ. ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಹಲವು ವಿಧೇಯಕಗಳು ಮಂಡನೆಯಾಗಲಿವೆ.
ವಿದ್ಯಾರ್ಥಿಗಳೇ ಗಮನಿಸಿ : `CET’ ದಾಖಲಾತಿ ಪರಿಶೀಲನೆಗೆ ಮತ್ತೊಂದು ಅವಕಾಶ ನೀಡಿದ ಕೆಇಎ
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ, ಮಳೆ ಅನಾಹುತ, ಪಿಎಸ್ ಐ ಸೇರಿದಂತೆ ಇತರೆ ನೇಮಕಾತಿ ಅಕ್ರಮ ಆರೋಪಗಳ ಬಗ್ಗೆ ಪ್ರಸ್ತಾಪಿಸಿ ಆಡಳಿತಾರೂಢ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದ್ದು, ಕಾಂಗ್ರೆಸ್ ತಿರುಗೇಟು ನೀಡಲು ಪ್ರತಿತಂತ್ರದೊಂದಿಗೆ ಆಡಳಿತಾರೂಢ ಬಿಜೆಪಿ ಸಜ್ಜಾಗಿದೆ.
BREAKING NEWS : ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಡ್ಯಾಂ ಬಳಿ ಘೋರ ದುರಂತ : ವಿದ್ಯಾರ್ಥಿ ಸೇರಿ ಇಬ್ಬರು ನೀರುಪಾಲು