ಕೆಎನ್ಎನ್ಡಿಜಿಟಲ್ ಡೆಸ್ಕ್ : ಅರುಣಾಚಲ ಪ್ರದೇಶದ ಮೇಲಿನ ಸಿಯಾಂಗ್ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ಐವರು ಸೈನಿಕರ ಮೃತದೇಹಗಳನ್ನ ಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದೆ.
ತೇಜ್ಪುರದ ರಕ್ಷಣಾ ಪಿಆರ್ಒ ಶನಿವಾರ “ಐದನೇ ಮತ್ತು ಕೊನೆಯ ಮೃತದೇಹವನ್ನ ಹೊರತೆಗೆಯುವುದರೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯು ಮುಕ್ತಾಯಗೊಂಡಿದೆ” ಎಂದು ತಿಳಿಸಿದರು.
Arunachal Pradesh chopper crash yesterday | Search and rescue mission concludes with the recovery of the fifth and last body: Defence PRO, Tezpur pic.twitter.com/LqRcKnLXF9
— ANI (@ANI) October 22, 2022
ಅಂದ್ಹಾಗೆ, ಇಬ್ಬರು ಪೈಲಟ್ಗಳು ಸೇರಿದಂತೆ ಐವರು ಸೇನಾ ಸಿಬ್ಬಂದಿಗಳನ್ನ ಹೊತ್ತ ಸುಧಾರಿತ ಲಘು ಹೆಲಿಕಾಪ್ಟರ್ (ALH) ನಿಯಮಿತ ಹಾರಾಟದಲ್ಲಿದ್ದಾಗ ಲೋವರ್ ಸಿಯಾಂಗ್ ಜಿಲ್ಲೆಯ ಲಿಕಾಬಲಿಯಿಂದ ಟೇಕ್ ಆಫ್ ಆಗಿತ್ತು, ಶುಕ್ರವಾರ ಬೆಳಿಗ್ಗೆ 10.43 ಕ್ಕೆ ಅಪಘಾತಕ್ಕೀಡಾಯಿತು.