ಬೆಂಗಳೂರು : ವಿದ್ಯುತ್, ಪೆಟ್ರೋಲ್, ಗ್ಯಾಸ್ ದರ ಏರಿಕೆ ಬಳಿಕ ಮತ್ತೊಂದು ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಕೊರೊನಾ ಚಿಕಿತ್ಸಾ ದರ ಏರಿಕೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ.
BIGG NEWS : ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ : `GST’ಯಿಂದ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಳ!
ಆರೋಗ್ಯ ಇಲಾಖೆಗೆ ಕೊರೊನಾ ಚಿಕಿತ್ಸಾ ದರ ಏರಿಕೆ ವಿಚಾರವಾಗಿ ಖಾಸಗಿ ಆಸ್ಪತ್ರೆಗಳು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಕೋವಿಡ್ ಚಿಕಿತ್ಸಾ ವೆಚ್ಚವನ್ನು ಹೆಚ್ಚಳದ ಜೊತೆಗೆ ಇತರೆ ಹಲವು 70 ಕ್ಕೂ ಹೆಚ್ಚು ಚಿಕಿತ್ಸೆಗಳ ದರಗಳ ಏರಿಕೆ ಮಾಡುವಂತೆ ಆರೋಗ್ಯ ಇಲಾಖೆಗೆ ಒತ್ತಾಯಿಸಿವೆ.
ಕೊರೊನಾ ಚಿಕಿತ್ಸೆ ಕೊಡಲು ಔಷಧಿಗಳ ದರ ಸೇರಿದಂತೆ ಬೇರೆ ಬೇರೆಯ ಖರ್ಚು ಹೆಚ್ಚಾಗಿದೆ. ಹೀಗಾಗಿ ಕೋವಿಡ್ ಚಿಕಿತ್ಸೆ ದರ ಹೆಚ್ಚಳ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ದರ ಪರಿಷ್ಕರಣೆಗೆ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಏರಿಕೆಯ ವಿಚಾರವಾಗಿ ಇಲಾಖೆ ಒಂದು ಸಮಿತಿ ರಚನೆ ಮಾಡಿದೆ. ತಜ್ಞರ ವರದಿ ಪಡೆದುಉ ಕೋವಿಡ್ ಚಿಕಿತ್ಸಾ ವೆಚ್ಚ ಮರು ಪರಿಷ್ಕರಣೆಯ ಬಗ್ಗೆ ನಿರ್ಣಯ ಕೈಗೊಳ್ಳಲು ಮುಂದಾಗಿದೆ.
Rain In Karnataka : ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ : ಹಲವು ಜಿಲ್ಲೆಗಳಲ್ಲಿ `ಯೆಲ್ಲೋ-ಆರೆಂಜ್ ಅಲರ್ಟ್’ ಘೋಷಣೆ