ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದರುರಾಗಿದ್ದು, ಕಳೆದ ಎರಡು ತಿಂಗಳ ಅವಧಿಯಲ್ಲಿ ಅಕ್ಕಿಯ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
BIGG NEWS : ಕರ್ನಾಟಕದಲ್ಲಿ 51 ವರ್ಷದ ಬಳಿಕ ದಾಖಲೆಯ ಮಳೆ : ಜುಲೈನಲ್ಲಿ ಸುರಿದಿದ್ದೆಷ್ಟು ಗೊತ್ತಾ.?
ಹೌದು, 1-2 ರೂ. ನಂತೆ ಏರಿಕೆಯಾಗುತ್ತಿದ್ದ ಅಕ್ಕಿ ಬೆಲೆ ಕಳೆದ ಎರಡು ತಿಂಗಳ ಅವಧಿಯಲ್ಲಿ 8-10 ರೂ.ವರೆಗೆ ಏರಿಕೆಯಾಗಿದೆ. ಈ ಮೂಲಕ ಜನಸಾಮನ್ಯರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಸ್ಟೀಮ್ ರೈಸ್ ದರ ಕೆಜಿಗೆ 38 ರಿಂದ 48 ರೂ. ಏರಿಕೆಯಾದರೆ, ಸೋನಾಮಸೂರಿ 52 ರೂ.ನಿಂದ 60 ರೂ. ದೋಸೆ ಅಕ್ಕಿ 30 ರಿಂದ 34 ರೂ. ಜೀರಾ ರೈಸ್ 110 ರೂ.ನಿಂದ 120 ರೂ.ವರೆಗೆ ಏರಿಕೆಯಾಗಿದೆ.
ದೇಶದಲ್ಲಿ ಈ ವರ್ಷ ಅಕ್ಕಿ ಉತ್ಪಾದನೆ ಕುಂಠಿತವಾಗಿದೆ. ಈ ನಡುವೆ ವಿದೇಶಗಳಿಗೆ ಹೆಚ್ಚಿನ ರಪ್ತು ಕಾರಣ ಅಕ್ಕಿ ಕೊರತೆ ಕಂಡುಬಂದಿದೆ. ಜುಲೈ, ಆಗಸ್ಟ್ ತಿಂಗಳಲ್ಲಿ ಅಕ್ಕಿದರ ಶೇ. 20 ರಷ್ಟು ದುಬಾರಿಯಾಗಿದ್ದು, ಇದೇ ಮೊದಲ ಬಾರಿಗೆ ಪ್ರತಿ ಕೆಜಿ ಅಕ್ಕಿ 8-10 ರೂ.ಹೆಚ್ಚಳವಾಗಿದೆ.