ಬೆಂಗಳೂರು : ಎಲೆಚುಕ್ಕೆ ರೋಗದ ಬೆನ್ನಲ್ಲೇ ಅಡಿಕೆ ಬೆಳೆಗಾರರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಅಡಿಕೆ ಧಾರಣೆ ಎರಡು ತಿಂಗಳ ಅಂತರದಲ್ಲಿ ಬರೋಬ್ಬರಿ 15 ಸಾವಿರ ರೂ. ಕುಸಿದಿದೆ.
BREAKING NEWS: ಪಂಜಾಬ್ನಲ್ಲಿ ಪೊಲೀಸ್ ಠಾಣೆಯ ಮೇಲೆ ರಾಕೆಟ್ ಲಾಂಚರ್ ದಾಳಿ
ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಶಿ ಇಡಿ ಪ್ರಕಾರದ ಅಡಿಕೆ ಬೆಲೆ ಕ್ವಿಂಟಲ್ ಗೆ 58 ಸಾವಿರ ರೂ. ಇತ್ತು. ಅಕ್ಟೋಬರ್ ನಲ್ಲಿ 50 ಸಾವಿರ ರೂ. ಇತ್ತು. ನಂತರ ಪ್ರತಿ ವಾರವೂ ಅಡಿಕೆ ಬೆಲೆಯಲ್ಲಿ ಕಡಿಮೆಯಾಗುತ್ತಾ ಬಂದಿದ್ದು, ಡಿಸೆಂಬರ್ ಎರಡನೇ ವಾರದಲ್ಲಿ ಅಡಿಕೆ ಬೆಲೆ ಕ್ವಿಂಟಲ್ ಗೆ 39 ಸಾವಿರ ರೂ. ತಲುಪಿದೆ.
ರಾಜ್ಯದಲ್ಲಿ ಪ್ರತಿ ವರ್ಷ ಸರಾಸಿ 6 ಲಕ್ಷ ಟನ್ ಅಡಿಕೆ ಉತ್ಪಾದಿಸಲಾಗುತ್ತಿದೆ. ದೇಶದಲ್ಲಿ ಬೆಳೆಯುವ ಅಡಿಕೆಯಲ್ಲಿ ರಾಜ್ಯದ ಪ್ರಮಾಣ ಶೇ. 50 ಕ್ಕಿಂತ ಹೆಚ್ಚಿದೆ. 2014-15 ರಲ್ಲಿ ರಾಶಿ ಅಡಿಕೆ ಧಾರಣೆ 1 ಲಕ್ಷದ ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.
VIRAL VIDEO: ಫಿಲ್ಮಿಂ ಸ್ಟೈಲ್ನಲ್ಲಿ ಹಾಡಹಗಲೇ 100 ಮಂದಿಯಿಂದ ‘ಡೆಂಟಲ್ ವೈದ್ಯೆ’ ಕಿಡ್ಯಾಪ್