ಗಂಗಾವತಿ : ಗಂಗಾವತಿ ಬಸ್ ನಿಲ್ದಾಣದಲ್ಲಿ ಅಪ್ರಾಪ್ತ ಬಾಲಕ ಮೇಲೆ ಪೊಲೀಸರಿಂದ ಮಧ್ಯರಾತ್ರಿ ಹಲ್ಲೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಆಪ್ತಾಪ್ತ ಮಗುವಿನ ಮೇಲೆ ಕಳ್ಳತನದ ಆರೋಪವನ್ನು ಹೊರಿಸಿ ಮಗುವಿನ ಮೇಲೆ ಪೊಲೀಸರಿಂದ ಕಾಲುಇಟ್ಟು ತಮ್ಮ ಅಟ್ಟಹಾಸ ಮೇರೆದಿದ್ದಾರೆ ಎನ್ನಲಾಗಿದೆ. ಅಪ್ರಾಪ್ತ ಮಕ್ಕಳನ್ನು ವಶಕ್ಕೆ ತೆಗೆದುಕೊಳ್ಳುವ ಮುನ್ನ ಸೂಕ್ತ ಮಾರ್ಗದರ್ಶನಗಳಿದ್ದು, ಪೊಲೀಸರು ಅವುಗಳನ್ನು ಮೂಲೆ ಗುಂಪು ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಯೋಜಕರ ಮಲ್ಲಿ ಎಸ್ ಮಾದಿಗ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವುದು ಹೀಗಿದೆ.ಗಂಗಾವತಿ ಬಸ್ ನಿಲ್ದಾಣದಲ್ಲಿ ಒಬ್ಬ ಮೈನರ್ ಬಾಲಕ ಚಪ್ಪಲಿ ಹೊಲಿಯುವ ಸಮಗಾರ ಸಮುದಾಯದ ಹುಡುಗನ ಮೇಲೆ ಕೆಲವು ಪೊಲೀಸ್ ಅಧಿಕಾರಿಗಳ ಮಾಡಿರುವ ಅಟ್ರಾಸಿಟಿ ದೌರ್ಜನ್ಯ ಇದು ಕಂಡನೀಯ ಇದನ್ನ ವಿರೋಧಿಸಿ ಅವರನ್ನು ಪ್ರಶ್ನಿಸಿರುವುದು , ಈ ಕೂಡಲೇ ಈ ವಿಡಿಯೋದಲ್ಲಿರುವ ಪೊಲೀಸ್ ಅಧಿಕಾರಿಗಳು ಅಮಾನತ್ ಆಗಬೇಕು . ಗಂಗಾವತಿ ಡಿಪೋ ಕಂಟ್ರೋಲರ್ ತಮ್ಮ ನಿರ್ಲಕ್ಷ ಕರ್ತವ್ಯ ಕಾರಣದಿಂದ ಇವರು ಸಹಿತ ಈ ವಿಚಾರದಲ್ಲಿ ಸಸ್ಪೆಂಡ್ ಆಗಬೇಕು.
ನಾನು ಅತಿ ಹೆಚ್ಚು ಪ್ರೀತಿಸುವುದು ಮತ್ತು ಅಭಿಮಾನಿಸುವ ಇಲಾಖೆ ಅಂದರೆ ಅದು ಪೊಲೀಸ್ ಇಲಾಖೆ ಆದರೆ ಇಂಥ ಕೆಲವು ಪೊಲೀಸರು ಮಾಡುವ ಕಾನೂನು ಉಲ್ಲಂಘನೆ ಕಾರ್ಯದಿಂದ ಜನಗಳಿಗೆ ಈ ಇಲಾಖೆಯ ಅಧಿಕಾರಿ ಮತ್ತು ಈ ಇಲಾಖೆಯ ಮೇಲೆ ಅಪ ನಂಬಿಕೆ ಬರುವಂತೆ ಮಾಡಬೇಡಿ ಅಂತ ಮನವಿ ಮಾಡಿಕೊಂಡಿದ್ದಾರೆ.
ಅಪ್ರಾಪ್ತಮಕ್ಕಳು ತಪ್ಪು ಮಾಡಿದಲ್ಲಿ ಕಾನೂನು ಅವರಿಗೆ ಆದ ಕೆಲವು ಕಾನೂನು ಪ್ರಕ್ರಿಯೆಗಳನ್ನು ಪೊಲೀಸರು ಅನುಸರಿಸಬಹುದಾದ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದು, ಅದರಂತೆ ನಡೆದುಕೊಳ್ಳಬೇಕಾಗಿದೆ. ಆದರೆ ಘಟನೆಯಲ್ಲಿ ಪೊಲೀಸರು ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ ಎನ್ನುವ ಗಂಭಿರ ಆರೋಪ ಕೇಳಿ ಬಂದಿದೆ. ಇದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದರು ಕೂಡ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸುಮ್ನೆ ಇರುವುದು ಆಯೋಗದ ಕಾರ್ಯವೈಖರಿಯನ್ನು ಪ್ರಶ್ನೆ ಮಾಡುವಂತಿದೆ ಅಂತ ದಲಿತ ಸಂಘಟನೆಗಳು ಆರೋಪಿಸಿದ್ದಾವೆ. ಇನ್ನಾದ್ರೂ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಮಕ್ಕಳ ಹಕ್ಕಗಳು ಆಯೋಗ ಕ್ರಮಕಕ್ಕೆ ಮುಂದಾಗುವುದಾ? ಎನ್ನುವುದನ್ನು ಕಾದು ನೋಡಬೇಕಾಗಿದೆ.








