ನವದೆಹಲಿ: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಕನ್ನಡ ರಾಜ್ಯೋತ್ಸವದ ಬಿಗ್ ಗಿಫ್ಟ್ ಎನ್ನುವಂತೆ ನವೆಂಬರ್ 10ರಿಂದ ಭಾರತದಲ್ಲಿ ಐದನೇ ವಂದೇ ಭಾರತ್ ಎಕ್ಸ್ ಪ್ರೆಸ್ ( Vande Bharat Express ) ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ನವೆಂಬರ್ 11 ರಿಂದ ಸಂಚಾರ ಆರಂಭಿಸಲಿದೆ.
BIG NEWS: ಪಿಂಚಣಿದಾರರೇ ಗಮನಿಸಿ: ʻಜೀವಂತ ಪ್ರಮಾಣ ಪತ್ರʼ ಸಲ್ಲಿಕೆ ಕುರಿತ ಪ್ರಮುಖ ಮಾಹಿತಿ ಇಲ್ಲಿದೆ
ಬೆಂಗಳೂರು ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾಗುತ್ತಿರುವ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 10ಕ್ಕೆ ಬೆಂಗಳೂರಿಗೆ ಭೇಟಿ ನೀಡಲಿದ್ದು, ಅವರೇ ಈ ಹೊಸ ರೈಲಿಗೆ ಚಾಲನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
BIGG NEWS: ಯೂಟ್ಯೂಬ್ನಲ್ಲಿ ವೀಡಿಯೋ ನೋಡಿ ATM ಕಳ್ಳತನಕ್ಕೆ ಯತ್ನಿಸಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್
ವಂದೇ ಭಾರತ್ ಚೆನ್ನೈ-ಮೈಸೂರು ನಡುವಿನ ವೇಳಾಪಟ್ಟಿ
20607 ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಜಂಕ್ಷನ್ ವಂದೇ ಭಾರತ್ ಎಕ್ಸ್ಪ್ರೆಸ್ ಬೆಂಗಳೂರು ಸಿಟಿ ಜಂಕ್ಷನ್ನಲ್ಲಿ ಕೇವಲ 1 ನಿಲುಗಡೆಯನ್ನು ಹೊಂದಿರುತ್ತದೆ. ಎಂಜಿಆರ್ ಚೆನ್ನೈ ಸೆಂಟ್ರಲ್ನಿಂದ ಬೆಳಗ್ಗೆ 5:50ಕ್ಕೆ ಹೊರಟು ಬೆಳಗ್ಗೆ 10:25ಕ್ಕೆ ಬೆಂಗಳೂರು ಸಿಟಿ ಜಂಕ್ಷನ್ಗೆ ತಲುಪಲಿದೆ.ಬೆಂಗಳೂರಿನಿಂದ ಬೆಳಗ್ಗೆ 10:30ಕ್ಕೆ ಹೊರಟು ಮಧ್ಯಾಹ್ನ 12:30ಕ್ಕೆ ಅಂತಿಮ ತಾಣವಾದ ಮೈಸೂರನ್ನು ತಲುಪಲಿದೆ.
ಈ ರೈಲು ಸುಮಾರು 497 ಕಿ.ಮೀ ದೂರವನ್ನು 6 ಗಂಟೆ 40 ನಿಮಿಷಗಳಲ್ಲಿ ಕ್ರಮಿಸಲಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ಭಾನುವಾರ, ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ವಾರದಲ್ಲಿ ಆರು ದಿನ ಚಲಿಸುತ್ತದೆ.
ವಂದೇ ಭಾರತ್ ರೈಲು ಮೈಸೂರು ಜಂಕ್ಷನ್ನಿಂದ ಮಧ್ಯಾಹ್ನ 1:05 ಕ್ಕೆ ಹೊರಟು 2:55 ಕ್ಕೆ ಬೆಂಗಳೂರು ಸಿಟಿ ಜಂಕ್ಷನ್ಗೆ ತಲುಪಲಿದೆ.ರೈಲು ಬೆಂಗಳೂರು ಸಿಟಿ ಜಂಕ್ಷನ್ನಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ರಾತ್ರಿ 7:35 ಕ್ಕೆ ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ.