ಬೆಂಗಳೂರು : ದೇಶಾದ್ಯಂತ ನಿಷೇಧಗೊಂಡಿರುವ ಪಿಎಫ್ ಐ ಸಂಘಟನೆಯ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗಗೊಂಡಿದ್ದು, ದೇಶಾದ್ಯಂತ ಹಿಡಿತ ಸಾಧಿಸಲು ಪಿಎಫ್ ಐ ಧರ್ಮಗುರುಗಳ ಮೂಲಕ ಮದರಸಗಳಲ್ಲೂ ಹಿಡಿತಕ್ಕೆ ಯತ್ನಿಸಿದ್ದರು ಎಂಬ ಸತ್ಯ ಬಯಲಾಗಿದೆ.
ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧ ಮಾಡಿದ ಬೆನ್ನಲ್ಲೇ ಪಿಎಫ್ ಐನ ಸ್ಪೋಟಕ ಸಂಗತಿಗಳು ಬಯಲಾಗುತ್ತಿವೆ. ದೇಶಾದ್ಯಂತ ಹಿಡಿತ ಸಾಧಿಸಲು ಪಿಎಫ್ ಐ ಬಿಗ್ ಪ್ಲಾನ್ ಮಾಡಿತ್ತು. ಅದರಂತೆ ಮದರಸಗಳನ್ನು ಮೊದಲು ಹಿಡಿತಕ್ಕೆ ಪಡೆದು ಮಕ್ಕಳಲ್ಲಿ ಪಿಎಫ್ ಐ ಸಿದ್ಧಾಂತ ಬೋಧನೆಗೆ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.
ಈ ಸಂಬಂಧ ಪಿಎಫ್ ಐ ಈಗಾಗಲೇ ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಮದರಸಗಳಲ್ಲಿ ಧರ್ಮಗುರುಗಳ ಮೂಲಕ ಮದರಸಗಳನ್ನು ಸಂಪೂರ್ಣವಾಗಿ ಅಧೀನಕ್ಕೆ ಪಡೆದಿದ್ದರು. ಮದರಸಗಳ ಅಧೀನಕ್ಕೆ ವಿರೋಧ ಮಾಡುವ ಜಮಾತ್ ಗಳಿಗೆ ಬೆದರಿಕೆ ಹಾಕಿದ್ದರು ಎಂದು ಹೇಳಲಾಗುತ್ತಿದೆ.
BREAKING NEWS : ಕಾಂಗ್ರೆಸ್ನ ಬುಡಕಟ್ಟು ಸಮುದಾಯದ ಶಾಸಕನ ಮೇಲೆ ಹಲ್ಲೆ: ಗುಜರಾತ್ನಲ್ಲಿ ಭುಗಿಲೆದ್ದ ಪ್ರತಿಭಟನೆ