ಕೆಎನ್ಎನ್ಡಿಜಿಟಲ್ ಡೆಸ್ಕ್ : ಘಾನಾದಲ್ಲಿ ಎಬೋಲಾ ತರಹದ ಮಾರ್ಬರ್ಗ್ ವೈರಸ್ ರೋಗದ ಎರಡು ಶಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಶುಕ್ರವಾರ ತಿಳಿಸಿದೆ.
ಘಾನಾದ ದಕ್ಷಿಣ ಆಶಾಂತಿ ಪ್ರದೇಶದ ಇಬ್ಬರು ರೋಗಿಗಳಿಂದ ತೆಗೆದುಕೊಂಡ ಮಾದರಿಗಳ ಪ್ರಾಥಮಿಕ ವಿಶ್ಲೇಷಣೆಯು ಸಕಾರಾತ್ಮಕವಾಗಿದೆ ಎಂದು ಡಬ್ಲ್ಯುಎಚ್ಒ ಹೇಳಿದೆ.
ಆದಾಗ್ಯೂ, ಸಂಪೂರ್ಣ ದೃಢೀಕರಣಕ್ಕಾಗಿ ಮಾದರಿಗಳನ್ನ ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯೊಂದಿಗೆ ಕೆಲಸ ಮಾಡುವ ಸೆನೆಗಲ್ನ ಡಕಾರ್ನಲ್ಲಿರುವ ಪಾಶ್ಚರ್ ಇನ್ಸ್ಟಿಟ್ಯೂಟ್ಗೆ ಕಳುಹಿಸಲಾಗಿದೆ.
“ಹೆಚ್ಚಿನ ತನಿಖೆಗಳು ನಡೆಯುತ್ತಿರುವುದರಿಂದ ಸಂಭಾವ್ಯ ಸಾಂಕ್ರಾಮಿಕದ ಪ್ರತಿಕ್ರಿಯೆಗಾಗಿ ಸಿದ್ಧತೆಗಳನ್ನ ತ್ವರಿತವಾಗಿ ಸ್ಥಾಪಿಸಲಾಗುತ್ತಿದೆ” ಎಂದು ಡಬ್ಲ್ಯುಎಚ್ಒ ಹೇಳಿದೆ, ಘಾನಾದಲ್ಲಿ ಆರೋಗ್ಯ ಅಧಿಕಾರಿಗಳನ್ನು ಬೆಂಬಲಿಸಲು ತಜ್ಞರನ್ನ ನಿಯೋಜಿಸುತ್ತಿದೆ ಎಂದು ಡಬ್ಲ್ಯುಎಚ್ಒ ಹೇಳಿದೆ.
ಇಬ್ಬರು ಶಂಕಿತ ರೋಗಿಗಳು ಆಸ್ಪತ್ರೆಯಲ್ಲಿ ಸಾಯುವ ಮೊದಲು ಅತಿಸಾರ, ಜ್ವರ, ವಾಕರಿಕೆ ಮತ್ತು ವಾಂತಿ ಸೇರಿದಂತೆ ರೋಗಲಕ್ಷಣಗಳನ್ನ ಹೊಂದಿದ್ದರು.
ಒಂದು ವೇಳೆ ಮಾರ್ಬರ್ಗ್ ಎಂದು ದೃಢಪಟ್ಟರೆ, ಈ ಪ್ರಕರಣಗಳು ಪಶ್ಚಿಮ ಆಫ್ರಿಕಾದಲ್ಲಿ ಎರಡನೇ ಬಾರಿಗೆ ಪತ್ತೆಯಾದಂತಾಗುತ್ತೆ ಎಂದು ಆರೋಗ್ಯ ಪ್ರಾಧಿಕಾರ ಮಾಹಿತಿ ನೀಡಿದೆ. ಆಗಸ್ಟ್ನಲ್ಲಿ ಗಿನಿಯಾ ಒಂದೇ ಒಂದು ಪ್ರಕರಣವನ್ನು ದೃಢಪಡಿಸಿದ ನಂತ್ರ ಐದು ವಾರಗಳಲ್ಲಿಯೇ ಪ್ರಕರಣಗಳು ಸ್ಫೋಟಗೊಂಡವು.