ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದು, ಈವರೆಗೂ ಕೃಷಿ ಪಂಪ್ ಸೆಟ್ ಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪೂರೈಕೆ ಸೌಲಭ್ಯಕ್ಕೆ ಕತ್ತರಿ ಹಾಕಲು ನಿರ್ಧರಿಸಿದೆ ಎನ್ನಲಾಗಿದೆ.
BREAKING NEWS : ಬಿಹಾರದ ಗಂಗಾ ನದಿಯಲ್ಲಿ 55 ಜನರಿದ್ದ ದೋಣಿ ಮುಳುಗಡೆ… ಮುಂದುವರೆದ ರಕ್ಷಣಾ ಕಾರ್ಯಾಚರಣೆ
ರೈತರ ಕೃಷಿ ಪಂಪ್ ಸೆಟ್ ಗಳಿಗೆ ದಿನಕ್ಕೆ ನಿರಂತರವಾಗಿ 7 ಗಂಟೆ ವಿದ್ಯುತ್ ಪೂರೈಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಇದೀಗ ಉಚಿತ ವಿದ್ಯತ್ ಬಳಕೆಗೆ ಮಿತಿ ಹೇರಿದೆ. ಇದರಿಂದ ರೈತರಿಗೆ ವಿದ್ಯುತ್ ಕೊರತೆ ಆತಂಕ ಎದುರಾಗಿದೆ. ಇನ್ಮುಂದೆ ರೈತರಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಸೌಲಭ್ಯಕ್ಕೆ ಕತ್ತರ ಹಾಕಿದೆ.
BIGG NEWS: ಗಣೇಶೋತ್ಸವ ಆಚರಿಸಲು ಮುಂದಾದ ಶಾಸಕ ಜಮೀರ್ ಅಹ್ಮದ್? ಸ್ಥಳೀಯರಿಂದ ವಿರೋಧ ಯಾಕೆ ಗೊತ್ತಾ?
ರಾಜ್ಯದಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ 21,33 ಮಿಲಿಯನ್ ಯುನಿಟ್ ವಿದ್ಯುತ್ ಬೇಕು. ಇದಕ್ಕೆ ಸರ್ಕಾರವು ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳಿಗೆ 16 ಸಾವಿರ ಕೋಟಿ ರೂ. ಸಹಾಯಧನ ನೀಡಬೇಕು. ಆದರೆ, ಪ್ರಸಕ್ತ ವರ್ಷ 12 ಸಾವಿರ ಕೋಟಿ ರೂ. ಮಾತ್ರ ನೀಡಿದೆ. ಇದರಿಂದ ಎಸ್ಕಾಂಗಳು ಸಹಾಯಧನಕ್ಕೆ ತಕ್ಕಂತೆ 16 ಸಾವಿರ ಮಿಲಿಯನ್ ಯುನಿಟ್ ವಿದ್ಯುತ್ ಮಾತ್ರ ಹಂಚಿಕೆ ಮಾಡಿವೆ. ಹೀಗಾಗಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಆಗುತ್ತಿಲ್ಲ.