ಬೆಳಗಾವಿ ; ರಾಜ್ಯದಲ್ಲಿ ಚರ್ಮಗಂಟು ರೋಗ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ಜನವರಿ 15 ರ ವೇಳೆಗೆ ಎಲ್ಲಾ ಜಾನುವಾರುಗಳಿಗೆ ಲಸಿಕೆ ನೀಡಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹ್ವಾಣ್ ಹೇಳಿದ್ದಾರೆ.
BIGG NEWS : ಜ.27 ರಿಂದ 3 ದಿನ ಅದ್ಧೂರಿ ಹಂಪಿ ಉತ್ಸವ : ಸಿಎಂ ಬೊಮ್ಮಾಯಿ ಚಾಲನೆ
ವಿಧಾನಪರಿಷತ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಚರ್ಮಗಂಟು ರೋಗ ನಿಯಂತ್ರಿಸುವ ಸಲುವಾಗಿ ಈಗಾಗಲೇ 92 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಮುಂದಿನ ವರ್ಷದ ಜನವರಿ 15 ರ ವೇಳೆಗೆ ಎಲ್ಲಾ ರಾಸುಗಳಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.
ರಾಸುಗಳಿಗೆ ಚರ್ಮಗಂಟು ರೋಗ 22 ರಾಜ್ಯಗಳಲ್ಲಿ ಬಂದಿದೆ. ರಾಜಸ್ಥಾನದಲ್ಲಿ 75 ಸಾವಿರ ಸಾವು ಸಂಭವಿಸಿದ್ದು, ರಾಜ್ಯದಲ್ಲಿ ಈವರೆಗೆ 22 ಸಾವಿರ ರಾಸುಗಳಿಗೆ ಮಾತ್ರ ಸಾವನ್ನಪ್ಪಿವೆ ಎಂದು ಮಾಹಿತಿ ನೀಡಿದ್ದಾರೆ.