ಹಾವೇರಿ : ಹಾವೇರಿಯಲ್ಲಿ 86ನೆಯ ಅಬಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೆಸರಾಂತ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ 2023 ಜನವರಿ 6 ಶುಕ್ರವಾರ, 7 ಶನಿವಾರ ಹಾಗೂ 8 ಭಾನುವಾರದಂದು ಮೂರು ದಿನಗಳ ಕಾಲ ನಡೆಸಲು ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದ್ದು, ಹುಬ್ಬಳ್ಳಿ-ಹಾವೇರಿ ಮುಖ್ಯರಸ್ತೆಯ ಆರ್.ಟಿ.ಓ. ಕಚೇರಿ ಸಮೀಪದ ಅಜ್ಜಯ್ಯನ ದೇವಸ್ಥಾನದ ಎದುರಿನ ಸ್ಥಳದಲ್ಲಿ ಸಮ್ಮೇಳನವನ್ನು ನಡೆಸಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಸಮ್ಮೇಳನದಲ್ಲಿ ಭಾಗವಹಿಸುವವರ ಪ್ರತಿನಿಧಿ ನೋಂದಣಿ, ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳ ನೋಂದಣಿ, ಸಮ್ಮೇಳನದ ಆಮಂತ್ರಣ ಪತ್ರಿಕೆ, ವಿವಿಧ ಸಮಿತಿಗಳು ಮತ್ತು ಸಮಿತಿಯ ಸದಸ್ಯರ ವಿವರಗಳು, ಹಾವೇರಿ ಕುರಿತಂತೆ ಮಾಹಿತಿ, ಸಾರಿಗೆ, ಸಂಪರ್ಕ, ವಸತಿ ವಿವರ, ಸಹಾಯವಾಣಿ ಸೇರಿದಂತೆ ಸಮ್ಮೇಳನದ ಸಂಪೂರ್ಣ ಮಾಹಿತಿ, ವಿವರಗಳನ್ನು ಒದಗಿಸಲು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಧುನಿಕ ಮೊಬೈಲ್ ಆ್ಯಪ್ ಅನ್ನು ಕನ್ನಡ ಸಾಹಿತ್ಯ ಪರಿಷತ್ತು ಸಿದ್ದಪಡಿಸಿದೆ. ಸಮ್ಮೇಳನದ ಪ್ರತಿನಿಧಿ ನೋಂದಣಿಗಾಗಿ
ಈ ಅಕ್ಷರ ಜಾತ್ರೆಯಲ್ಲಿ ಭಾಗವಹಿಸಲು ಇಚ್ಛಿಸುವ ಅಭಿಮಾನಿಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿ “ಕನ್ನಡ ಸಾಹಿತ್ಯ de” https://play.google.com/store/apps/details?id=com.tritantra.kasapa US ಮಾತ್ರವೇ ರೂ. ೫೦೦/- (ಐದು ನೂರು ರೂಪಾಯಿ)ಗಳ ಶುಲ್ಕವನ್ನು ಆ್ಯಪ್ ಮೂಲಕವೇ ಪಾವತಿಸಿ ಪ್ರತಿನಿಧಿಯಾಗಿ ನೋ೦ದಾಯಿಸಿಕೊಳ್ಳಬಹುದಾಗಿದೆ.
ಪುಸ್ತಕ ಮಳಿಗೆಗಳ ನೋಂದಣಿಗಾಗಿ
ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳನ್ನು ತೆರೆಯಲು ಇಚ್ಚಿಸುವ ಪ್ರಕಾಶಕರು, ಮಾರಾಟಗಾರರು ಗೂಗಲ್ ಪ್ಲೇ ಶೋನಲ್ಲಿ “ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ” ಆ್ಯಪ್ https://play.google.com/store/apps/ details?id=com.tritantra.kasana ಮೂಲಕ ಮಾತ್ರವೇ ಶುಸ್ತಕ ಮಳಿಗೆ ಒಂದಕ್ಕೆ ರೂ. 3,000/- (ಮೂರು ಸಾವಿರ ರೂಪಾಯಿ) ಶುಲ್ಕವನ್ನು ಆ್ಯಪ್ ಮೂಲಕವೇ ಪಾಪಸಿ ಮಳಿಗೆಗಳನ್ನು ತರೆಯು ನೊಂದಾಯಿಸಿಕೊಳ್ಳಬಹುದಾಗಿದೆ.
ವಿವರಗಳು ಈ ಕೆಳಕಂಡಂತಿದೆ
1) ಪುಸ್ತಕ ಮಳಿಗೆಗಳನ್ನು ತೆರೆಯಲು ಇಚ್ಛಿಸುವ ಲೇಖಕರು, ಪ್ರಕಾಶಕರು, ಮಾರಾಟಗಾರರು. ಮಸ್ತಕ ಮಳಿಗೆಯ ಮುಖ್ಯಸ್ಥರು / ಮೇಲ್ವಿಚಾರಕರು ವೈಯಕ್ತಿಕವಾಗಿ ಕನ್ನಡ ಸಾಹಿತ್ಯ ಮರತ್ತಿನ ಸದಸ್ಯತ್ವವನ್ನು ಕಡ್ಡಾಯವಾಗಿ ಹೊಂದಿರಬೇಕು. ಒಂದು ವೇಳೆ ಇನ್ನೂ ಪರಿಷತ್ತಿನ ಸದಸ್ಯರಾಗದಿದ್ದಲ್ಲಿ ಗೂಗಲ್ ಪ್ಲೇ ಸ್ಟೋರ್ನಲ್ಲಿ https://hhit.ly/kasapappes ಮೂಲಕ / ಆ್ಯಪಲ್ (ಐಓಎಸ್) ಸ್ಟೋರ್ನಲ್ಲಿ https://apple.ca/Zza 231 ಮೊರಬ ಸದಸ್ಯತ್ವ ಪಡೆದುಕೊಳ್ಳಬೇಕು. ಸದಸ್ಯತ್ವ ಪಡೆದ ತಕ್ಷಣವೇ ದೊರೆಯುವ ಸದಸ್ಯತ್ವ ಸಂಖ್ಯೆಯನ್ನು ಸಮ್ಮೇಳನದ ಆಪ್ನಲ್ಲಿ https://play.google.com/ store/apps/details?id=com.tritantra.kasapavi, romctldayam
2) ದಿನಾಂಕ 01-12-2022 ರ ಮಧ್ಯರಾತ್ರಿ 12 ರಿಂದ ಮಳಿಗೆಗಳ ನೋಂದಣೆ ಲಭ್ಯವಿದ್ದು, ದಿನಾಂಕ 18- 12-2022 (ರಾತ್ರಿ 12,೦೦ರ ವರೆಗೆ) ಅ೦ತಿದು ದಿನವಾಗಿರುತ್ತದೆ,
3) ಮೂರು ದಿವಸಗಳಿಗೆ ಒಂದು ಹಾಗೂ ಒಂದಕ್ಕಿಂತ ಹೆಚ್ಚು ಪುಸ್ತಕ ಮಳಿಗೆ ಬೇಕಾದಲ್ಲಿ ತಲಾ 3,000/- (ಮೂರು ಸಾವಿರ ರೂಪಾಯಿ)ಗಳ ಬಾಡಿಗೆ ನೀಡುವುದು.
4) ಕಡ್ಡಾಯವಾಗಿ ಕನ್ನಡ ಪುಸ್ತಕ ಮಾರಾಟಕ್ಕೆ ಮಾತ್ರ ಅವಕಾಶ, ಬೇರೆ ಭಾಷೆಗಳ ಪುಸ್ತಕ ಮಾರಾಟ ಕಂಡುಬರದಲ್ಲಿ ಮಾರಾಟಕ್ಕೆ ನೀಡಲಾದ ಪರವಾನಗಿಯನ್ನು ರದ್ದುಪಡಿಸಲಾಗುವುದು.
5) ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಕಂಡುಬಂದಲ್ಲಿ ಪರವಾನಗಿಯನ್ನು ರದ್ದುಪಡಿಸಿ, ಮಳಿಗೆಯನ್ನು ತೆರವುಗೊಳಿಸಲಾಗುವುದು,
6) ನೋಂದಣಿಯಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು,
7) ಮಳಿಗೆಗಳ ಹಂಚಿಕೆಯನ್ನು ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳ ಸಮ್ಮುಖದಲ್ಲಿ ಲಾಟರಿ ಆಧಾರದ ಮೇಲೆ ನಿರ್ಧರಿಸಲಾಗುವುದು ಮತ್ತು ಹಂಚಿಕೆಯ ದಾಖಲಾತಿ ಚಿತ್ರೀಕರಣ ಮಾಡಲಾಗುವುದು.