ಬೆಂಗಳೂರು : ದೇಶದಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆ ನಿಷೇಧದ ಬೆನ್ನಲ್ಲೇ ಸ್ಪೋಟಕ ಮಾಹಿತಿಗಳು ಹೊರಬಿದ್ದಿದ್ದು, ಪಿಎಫ್ ಐ ನಿಂದ ತಮಿಳುನಾಡು ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಕೋಮುಗಲಭ ಸೃಷ್ಟಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂಬ ಬಗ್ಗೆ ಪೊಲೀಸರಿಗೆ ಮಹತ್ವದ ದಾಖಲೆಗಳು ಲಭ್ಯವಾಗಿವೆ ಎನ್ನಲಾಗಿದೆ.
ಪೊಲೀಸರ ತನಿಖೆಯ ವೇಳೆ ಕರ್ನಾಟಕ ಮತ್ತು ತಮಿಳುನಾಡಿನ ಹಲವು ಭಾಗಗಳಲ್ಲಿ ಕೋಮುಗಲಭೆ ಸೃಷ್ಟಿಸಲು ಸಿದ್ದತೆ ನಡೆಸಿತ್ತು ಎನ್ನಲಾಗಿದ್ದು, ಕರ್ನಾಟಕ ಸೇರಿದಂತೆ ದೇಶಾದ್ಯಂತ ನಡೆದ ಕೆಲ ಘಟನೆಗಳಿಂದ ಆಕ್ರೋಶಗೊಂಡಿದ್ದ ಪಿಎಫ್ಐ ಸಂಘಟನೆ ಹಿಂದೂ ಸಮುದಾಯದ ಸಾಮರಸ್ಯ ಹಾಳು ಮಾಡಿ ದೊಡ್ಡ ಮಟ್ಟದಲ್ಲಿ ಗಲಭೆ ಸೃಷ್ಟಿಗೆ ಸಿದ್ದತೆ ನಡೆಸಿತ್ತು ಎಂದು ಹೇಳಲಾಗುತ್ತಿದೆ.
ಪಿಎಫ್ ಐ ಸಂಘಟನೆ ಯುವಕರನ್ನು ತನ್ನತ್ತ ಸೆಳೆದು ಯುವಕರನ್ನು ಗುಪ್ತವಾಗಿ ಟ್ರೈನಿಂಗ್ ಕ್ಯಾಂಪ್ ಗಳಲ್ಲಿ ಕೋಮುಗಲಭೆ ಸೃಷ್ಟಿಗೆ ಪ್ಲ್ಯಾನ್ ಮಾಡುತ್ತಿತ್ತು. ಪ್ರಮುಖವಾಗಿ ದಕ್ಷಿಣ ಕನ್ನಡದ ಪುತ್ತೂರಿನ ಕಾಡಿನ ಮಧ್ಯೆ ಯುವಕರಿಗೆ ಟ್ರೈನಿಂಗ್ ಕ್ಯಾಂಪ್ಗಳನ್ನು ಆಯೋಜನೆ ಮಾಡಿದ್ದ ವಿಚಾರ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
BIGG NEWS : ಶಿವಮೊಗ್ಗದಲ್ಲಿ ಶಂಕಿತರ ಉಗ್ರರ ಬಂಧನ ಕೇಸ್ : ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ