ಬೆಂಗಳೂರು : ರಾಜ್ಯದಲ್ಲಿ ಹಿಜಾಬ್, ಹಲಾಲ್ ವಿವಾದದ ಬಳಿಕ ಮತ್ತೊಂದ ವಿವಾದ ಶುರುವಾಗುವ ಲಕ್ಷಣಗಳು ಕಂಡುಬರುತ್ತಿದ್ದು, ಮದರಸಾಗಳಲ್ಲಿನ ಪಠ್ಯ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ.
BIGG NEWS : ʻ ನನಗೂ ಆಶೀರ್ವಾದ ಮಾಡಿ ʼ ರಾಮನಗರದಲ್ಲೂ ʼ ಸಿಎಂ ಆಗುವ ಬಯಕೆ ʼ ವ್ಯಕ್ತಪಡಿಸಿದ ಡಿಕೆಶಿ
ಈ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯೆ ನೀಡಿದ್ದು, ಮದರಸಾಗಳಲ್ಲಿ ಮಕ್ಕಳಿಗೆ ಇತಿಹಾಸ, ಹಾಗೂ ರಾಷ್ಟ್ರೀಯತೆಯ ಬಗ್ಗೆ ಯಾವುದೇ ಪಾಠ ಬೋಧನೆ ಇಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಮದರಸಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಮದರಸಾಗಳಲ್ಲಿ ಪಠ್ಯ ಬದಲಾವಣೆಯ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
BIGG NEWS : ರಾಜ್ಯ ಸರ್ಕಾರದಿಂದ 12 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನಾಮನಿರ್ದೇಶನ ರದ್ದು
ಮದರಸದಲ್ಲಿ ಶಿಕ್ಷಣ ಮಕ್ಕಳಿಗೆ ಬೆಳವಣಿಗೆ ಪೂರಕವಾಗಿಲ್ಲ ಎಂದು ಕೆಲ ಪೋಷಕರು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ. ಎಲ್ಲ ಮಕ್ಕಳನ್ನು ಶಿಕ್ಷಣ ಇಲಾಖೆಯ ಎನ್ರೂಲ್ ಮೆಂಟ್ ವ್ಯಾಪ್ತಿಗೆ ತರಬೇಕು. ಎಲ್ಲ ಮಕ್ಕಳು ಸಮಾಜ, ವಿಜ್ಞಾನ, ಗಣಿತ, ಇತಿಹಾಸ ಕಲಿಯುವುದು ಕಡ್ಡಾಯವಾಗಿದ್ದು, ಮದರಸಾಗಳಲ್ಲೂ ಮಕ್ಕಳು ಸಮಾಜ, ವಿಜ್ಞಾನ, ಗಣಿತ, ಇತಿಹಾಸ ಕಲಿಸುವಂತೆ ಶಿಕ್ಷಣ ಇಲಾಖೆಗೆ ಬೇಡಿಕೆ ಬಂದಿದೆ ಎಂದು ತಿಳಿಸಿದ್ದಾರೆ.