ಬೆಂಗಳೂರು: ನಿನ್ನೆಯಷ್ಟೇ ರಾಜ್ಯ ಸರ್ಕಾರದಿಂದ ಹೈಕೋರ್ಟ್ ( Karnataka High Court ) ಆದೇಶದ ಹಿನ್ನಲೆಯಲ್ಲಿ ಎಸಿಬಿ ರದ್ದುಗೊಳಿಸಿ ( ACB Cancel ), ಅಧಿಕೃತವಾಗಿ ಆದೇಶಿಸಿತ್ತು. ಈ ಬೆನ್ನಲ್ಲೇ ಎಸಿಪಿಯಲ್ಲಿನ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ( Karnataka Lokayukta ) ವರ್ಗಾವಣೆಗೊಳಿಸುವಂತೆಅಧಿಕೃತವಾಗಿ ಆದೇಶಿಸಿದೆ.
BIGG NEWS : ಕಾಲುವೆ ಒತ್ತುವರಿ : ಬೆಂಗಳೂರಿನ ರೈನ್ ಬೋ ಡ್ರೈವ್ ಲೇಔಟ್ ವಿಲ್ಲಾಗಳಿಗೆ ನೋಟಿಸ್
ಈ ಸಂಬಂಧ ಎಸಿಬಿಯ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದು, ಎಸಿಬಿಯ ಎಲ್ಲಾ ತನಿಖೆ, ಪ್ರಕರಣಗಳ ಕಡತಗಳನ್ನು ಸಂಪೂರ್ಣವಾಗಿ ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸುವಂತೆ ಸೂಚಿಸಿದ್ದಾರೆ. ಎಲ್ಲಾ ತನಿಖೆಗಳು, ವಿಚಾರಣೆ, ಇತರ ಶಿಸ್ತು ಪ್ರಕರಣ ಹಾಗೂ ಖಾಸಗಿ ದೂರು ಪ್ರಕರಣಗಳ ವರ್ಗಾವಣೆಗೆ ಆದೇಶಸಿರುವಂತ ಅವರು, ಎಲ್ಲಾ ಕಡತಗಳನ್ನು ವರ್ಗಾಯಿಸಿ, ಸ್ವೀಕೃತಿ ಪಡೆಯುವಂತೆ ಹೇಳಿದ್ದಾರೆ.
ಇದಲ್ಲದೇ ಸೆಪ್ಟೆಂಬರ್ 12ರ ಸಂಜೆ 5 ಗಂಟೆಯೊಳಗೆ ಪಾಲನಾ ವರದಿಯನ್ನು ಸಲ್ಲಿಸುವಂತೆ ಎಸಿಬಿಯ ಆಡಳಿತ ವಿಭಾಗದ ಎಸ್ಪಿಗೆ, ಕಡತ ವರ್ಗಾವಣೆಯ ಮೇಲುಸ್ತುವಾರಿ ನೀಡಿದ್ದಾರೆ. ಜೊತೆಗೆ ರಾಜ್ಯದ ಎಲ್ಲಾ ವಲಯಗಳ ಕಡತ ಪಡೆದ ವರದಿ ಸಲ್ಲಿಸುವಂತೆಯೂ ತಿಳಿಸಿದ್ದಾರೆ.