ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಹಿರಿಯ ನಟಿಯರಾದ ಜಯಮಾಲ, ಶ್ರತಿ ಮತ್ತು ಮಾಳವಿಕ ಅವಿನಾಶ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ದಿವಂಗತ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸಿದರು. ಈ ನಡುವೆ ಸಚಿವ ಸಂಪುಟ ಸಚಿವ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ.
ಇತ್ತೀಚೆಗೆ ನಿಧನರಾದ ಪಂಚಭಾಷಾ ನಟಿ ಬಿ. ಸರೋಜಾದೇವಿ ಅವರ ಹೆಸರನ್ನು ಅವರು ವಾಸವಿದ್ದ ಮಲ್ಲೇಶ್ವರದ ನಾಮಕರಣ ಮಾಡುವಂತೆಯೂ ಮನವಿ ಮಾಡಿದರು.ಈ ನಡುವೆ ಇಂದು ಭಾರತಿ ವಿಷ್ಣುವರ್ಧನ್ ಮತ್ತು ಅನಿರುದ್ ವಿಷ್ಣುವರ್ಧನ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಿದರು ವಿಷ್ಣು ಸ್ಮಾರಕ ನಿರ್ಮಾಣಕ್ಕೆ 10 ಗುಂಟೆ ಮೀಸಲಿಡಬೇಕು,ವಿಷ್ಣು ಹುಟ್ಟು ಹಬ್ಬದ ಒಳಗೆ ಸರ್ಕಾರ ಭೂಮಿಗೆ ಅನುಮತಿಸಬೇಕು. ವಿಷ್ಣುವರ್ಧನ್ ಅವರಿಗೆ ʼಕರ್ನಾಟಕ ರತ್ನʼ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 1992ರಲ್ಲಿ ಪ್ರಾರಂಭಿಸಲಾಯಿತು ಒಟ್ಟಾರೆ ಇದುವರೆಗೆ ಹತ್ತು ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.ಕೊನೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ 2022 ನವೆಂಬರ್ 01 ರಂದು ನೀಡಲಾಗಿದೆ.
ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕುವೆಂಪು – ಸಾಹಿತ್ಯ – 1992
ಡಾ. ರಾಜ್‌ಕುಮಾರ್ – ಚಲನಚಿತ್ರ – 1992
ಎಸ್.ನಿಜಲಿಂಗಪ್ಪ – ರಾಜಕೀಯ – 1999
ಸಿ.ಎನ್.ಆರ್.ರಾವ್ – ವಿಜ್ಞಾನ – 2000
ದೇವಿಪ್ರಸಾದ್ ಶೆಟ್ಟಿ – ವೈದ್ಯಕೀಯ – 2001
ಭೀಮಸೇನ ಜೋಷಿ – ಸಂಗೀತ – 2005
ಶ್ರೀ ಶಿವಕುಮಾರ ಸ್ವಾಮೀಗಳು – ಸಾಮಾಜಿಕ ಸೇವೆ – 2007
ದೇ. ಜವರೇಗೌಡ – ಸಾಹಿತ್ಯ -2008
ಡಿ. ವೀರೇಂದ್ರ ಹೆಗ್ಗಡೆ – ಸಾಮಾಜಿಕ ಸೇವೆ – 2009.
ದಿ. ಪುನೀತ್ ರಾಜ್‌ಕುಮಾರ್- ಸಿನಿಮಾ ಹಾಗೂ ಸಾಮಾಜಿಕ ಸೇವೆ -2021