ಧಾರವಾಡ : 1994 ರಲ್ಲಿ ಕ್ಯಾರಕೊಪ್ಪ ಗ್ರಾಮ ಪಂಚಾಯತ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಕಲಂಗಳಡಿ ಅಪರಾದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿತನಾದ ಕ್ಯಾರಕೊಪ್ಪ ಗ್ರಾಮದ ಚಂದ್ರಪ್ಪ ತಂದೆ ಆಶ್ವತಪ್ಪ ಹುರಳಿ ಎಂಬ ವ್ಯಕ್ತಿ 28 ವರ್ಷಗಳಿಂದ ತಲೆಮರೆಸಿಕೊಂಡಿದ್ದನು.
ಜಪಾನ್ನಲ್ಲಿ ಭಾರೀ ಹಿಮಪಾತ: 17 ಮಂದಿ ಸಾವು, 90ಕ್ಕೂ ಹೆಚ್ಚು ಜನರಿಗೆ ಗಾಯ
ಆರೋಪಿತನ ಪತ್ತೆಗಾಗಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವರ ನೇತೃತ್ವದಲ್ಲಿ ಒಂದು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ, ಪತ್ತೆ ಕಾರ್ಯ ಕೈಗೊಳ್ಳಲಾಗಿತ್ತು. ಆರೋಪಿತನು ಸದ್ಯ ಮೈಸೂರಿನಲ್ಲಿ ಇರುವ ಬಗ್ಗೆ ಮಾಹಿತಿ ಕಲೆಹಾಕಿ, ಮೈಸೂರಿಗೆ ತೆರಳಿ ಚಾಮುಂಡಿ ಬೆಟ್ಟ ರಸ್ತೆಯ ಕೆ.ಆರ್.ಮಿಲ್ ಗೆಸ್ಟ್ ಹೌಸ್ ಹತ್ತಿರ ಆರೋಪಿತ ಚಂದ್ರಪ್ಪ ಅಶ್ವತಪ್ಪ ಹುರಳಿಯನ್ನು ಹಿಡಿದು ಡಿಸೆಂಬರ್ 20, 2022 ರಂದು ಠಾಣೆಗೆ ಕರೆದುಕೊಂಡು ಬಂದು, ನ್ಯಾಯಾಲಯಕ್ಕೆ ಹಾಜರ ಪಡಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಸದ್ಯ ಆರೋಪಿತನು ನ್ಯಾಯಾಂಗ ಬಂದನದಲ್ಲಿದ್ದಾನೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಪಿಐ ಮಂಜುನಾಥ ಕುಸುಗಲ್ ಅವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳಾದ ಕೆ.ಎಚ್. ಕಾಂಬಳೆ, ಕೃಷ್ಣಾ ವಿಭೂತಿ, ಮಾರುತಿ ಕುಂಬಾರ ಹಾಗೂ ಇತರೆ ಸಿಬ್ಬಂದಿಯವರು 1994 ರಿಂದ ಸುಮಾರು 28 ವರ್ಷದಿಂದ ತಲೆಮರೆಸಿಕೊಂಡಿರುವ ಆರೋಪಿತನನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣವನ್ನು ಬೇಧಿಸುವಲ್ಲಿ ಮಹತ್ವದ ಪಾತ್ರವಹಿಸಿದ ತಂಡದ ಕಾರ್ಯವನ್ನು ಶ್ಲಾಘಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನವನ್ನು ಘೋಷಿಸಿದ್ದಾರೆ.