ಬೆಳಗಾವಿ : ಜಮೀನು, ಆಸ್ತಿಗಳನ್ನು ಕೆ-2 ಸಾಫ್ಟ್ ವೇರ್ ಮೂಲಕ ಅಪ್ ಲೋಡ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಪ್ರಾಯೋಗಿಕವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ’ಗೆ ಪೂರಕವಾಗಿ ಜ.26ರಂದು ‘ಹೊಸ ಇತಿಹಾಸ ಪಠ್ಯಕ್ರಮ’ ಜಾರಿ
ಈ ಕುರಿತು ವಿಧಾನಪರಿಷತ್ ನಲ್ಲಿ ಮಾಹಿತಿ ನೀಡಿದ ಸಚಿವರು, ಕೆ-2 ಸಾಫ್ಟ್ ವೇರ್ ನಲ್ಲಿ ಕಂದಾಯ ಇಲಾಖೆಯ ಎಲ್ಲ ಆಸ್ತಿ ದಾಕಲಾಗಿರುತ್ತದೆ. ಹೀಗಾಗಿ ಯಾರೂ ಕೂಡ ದಾಖಲೆಗಳನ್ನು ಸಲ್ಲಿಸುವ ಪ್ರಶ್ನೆಯೇ ಬರುವುದಿಲ್ಲ. ಒಂದು ಆಸ್ತಿಯ ಮೇಲೆ ಜನರು ಹಕ್ಕು ಪ್ರತಿಪಾದಿಸಿ ನಕಲಿ ದಾಖಲೆ ಸಲ್ಲಿಸಲು ಅಥವಾ ತಿದ್ದುಪಡಿ ತರಲು ಅವಕಾಶವೇ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಯಾವುದೇ ಒಂದು ಕುಟುಂಬದ ಸದಸ್ಯರು ತಮ್ಮೊಳಗೆ ಆಸ್ತಿಯನ್ನು ಹಂಚಿಕೆ ಮಾಡಿ ನಕ್ಷೆಯಲ್ಲಿ ಗುರುತಿಸುವ ಜೊತೆಗೆ ಆಧಾರ್ ಮಾಹಿತಿಯನ್ನು ಆ್ಯಪ್ ಮೂಲಕ ಅಪ್ ಲೋಡ್ ಮಾಡಿದ್ರೆ ಅವರ ಹೆಸರಿಗೆ ಆಸ್ತಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
BIGG NEWS : ವಿಧಾನಪರಿಷತ್ ನಲ್ಲಿ `ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ ವಿಧೇಯಕ’ ಅಂಗೀಕಾರ