ಕೆಎನ್ಎನ್ಡಿಜಿಟಲ್ ಡೆಸ್ಕ್ : ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC) ದಲಿತ ಮಾನವ ಹಕ್ಕುಗಳ ಸಂಘಟನೆ ಸೇರಿದಂತೆ ಒಂಬತ್ತು ಎನ್ಜಿಒಗಳನ್ನ ಗುರುತಿಸಿದೆ. ಭಾರತ, ಚೀನಾ ಮತ್ತು ರಷ್ಯಾ ಸೇರಿದಂತೆ ಅನೇಕ ದೇಶಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವು, ಇದರ ಹೊರತಾಗಿಯೂ ಮಾನ್ಯತೆ ನೀಡಲಾಗಿದೆ.
ಈ ಒಂಬತ್ತು ಎನ್ ಜಿಒಗಳಿಗೆ ವಿಶೇಷ ಸಮಾಲೋಚಕ ಸ್ಥಾನಮಾನವನ್ನ ನೀಡಲಾಗುವುದು. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯು ವಿಶ್ವಸಂಸ್ಥೆಯ ಆರು ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಪರಿಷತ್ತು ಆರ್ಥಿಕ ಮತ್ತು ಸಾಮಾಜಿಕ ವಿಷಯಗಳನ್ನ ನೋಡಿಕೊಳ್ಳುತ್ತದೆ.
ಈ ಸಂಘಟನೆಗಳನ್ನ ಗುರುತಿಸುವ ಅಮೆರಿಕ ಪ್ರಾಯೋಜಿತ ನಿರ್ಣಯವನ್ನ ಬುಧವಾರ ಮತ ಚಲಾಯಿಸಲಾಯಿತು. ಈ ಎನ್ಜಿಒಗಳಲ್ಲಿ ಇಂಟರ್ನ್ಯಾಷನಲ್ ದಲಿತ ಸಾಲಿಡಾರಿಟಿ ನೆಟ್ವರ್ಕ್ (IDSN), ಅರಬ್-ಯುರೋಪಿಯನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಅಂಡ್ ಇಂಟರ್ನ್ಯಾಷನಲ್ ಲಾ, ಬಹ್ರೇನ್ ಹ್ಯೂಮನ್ ರೈಟ್ಸ್ ಸೆಂಟರ್, ಕಾಪ್ಟಿಕ್ ಸಾಲಿಡಾರಿಟಿ ಗಲ್ಫ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್, ಅಂತರ ಪ್ರಾದೇಶಿಕವಲ್ಲದ ಮಾನವ ಹಕ್ಕುಗಳ ಸಂಘಟನೆ ಮ್ಯಾನ್ ಅಂಡ್ ಲಾ, ಆಂಡ್ರೆ ರಿಲ್ಕೊವ್ ಫೌಂಡೇಶನ್ ಫಾರ್ ಹೆಲ್ತ್ ಅಂಡ್ ಸೋಷಿಯಲ್ ಜಸ್ಟೀಸ್, ವರ್ಲ್ಡ್ ಯೂನಿಯನ್ ಆಫ್ ಕೊಸಾಕ್ ಅಟ್ಮಾಸ್ ಅಂಡ್ ವರ್ಲ್ಡ್ ವಿಥೌಟ್ ಜಿನೋಸೈಡ್ ಸೇರಿವೆ.
ಗೊತ್ತುವಳಿ ಪರವಾಗಿ 24 ಮತಗಳು, ವಿರುದ್ಧವಾಗಿ 17 ಮತಗಳು ಚಲಾವಣೆಯಾದವು, ಗೊತ್ತುವಳಿ ಪರವಾಗಿ ದಾಖಲೆಯ 24 ಮತಗಳು ಮತ್ತು ವಿರುದ್ಧವಾಗಿ 17 ಮತಗಳು ಚಲಾವಣೆಯಾದವು. 12 ಸದಸ್ಯರು ಗೈರು ಹಾಜರಾಗಿದ್ದರು. ಮಂಡಳಿಯ 19 ಸದಸ್ಯರ ಸಮಿತಿಯು ಒಂಬತ್ತು ಎನ್ಜಿಒಗಳ ಮಾನ್ಯತೆ ಅರ್ಜಿಗಳನ್ನ ಈ ವರ್ಷದ ಸೆಪ್ಟೆಂಬರ್’ನಲ್ಲಿ ತಿರಸ್ಕರಿಸಿತ್ತು. ಈ ಸಮಿತಿಯು ಎನ್ಜಿಒಗಳ ಮಾನ್ಯತೆ ಅರ್ಜಿಗಳನ್ನ ಪರಿಗಣಿಸುತ್ತದೆ. ಒಮ್ಮೆ ಅರ್ಜಿಯನ್ನ ಪರಿಶೀಲಿಸಿ ಸಮಿತಿಯು ಅನುಮೋದಿಸಿದ ನಂತರ, ಅದನ್ನು ಸಲಹೆಗಾರರನ್ನಾಗಿ ಮಾಡಲು ಶಿಫಾರಸು ಮಾಡಲಾಗುತ್ತದೆ.
Gujarat poll results: 140 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಗುಜರಾತಿನ ಮೋರ್ಬಿ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು