ತುಮಕೂರು : ಐದು ವರ್ಷದ ಬಾಲಕನ ದಾರುಣ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಿಗೇನಹಳ್ಳಿ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಆಯಂಬುಲೆನ್ಸ್ ಚಾಲಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
BIGG NEWS : ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ನ 250 ವಾರ್ಡ್ಗಳಿಗೆ ಚುನಾವಣೆ, ಮತದಾನ ಪ್ರಾರಂಭ
ಆಕಸ್ಮಿಕವಾಗಿ ನೀರಿನ ಸಂಪ್ ಗೆ ಬಿದ್ದು ಅಸ್ವಸ್ಥಗೊಂಡಿದ್ದ ಶೌಖತ್, ಮಲ್ಲಿಕಾ ದಂಪತಿಯ ಪುತ್ರ 5 ವರ್ಷದ ಅಬ್ಬಾಸ್ ನನ್ನು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಆದರೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಮಗು ಮೃತಪಟ್ಟಿತ್ತು.
BIGG NEWS : ಸಿದ್ದರಾಮಯ್ಯ ಗೋಮಾಂಸ ತಿಂದರೆ ಜೈಲಿಗೆ ಹಾಕಿಸುತ್ತೇನೆ : ಸಚಿವ ಪ್ರಭು ಚವ್ಹಾಣ್ ಸವಾಲು
ಕೊಡಿಗೇನಹಳ್ಳಿ ಗ್ರಾಮದ ಶೌಕತ್ ಎಂಬುವವರ ಮಗ ಅಬು ಎಂಬ 5 ವರ್ಷದ ಮಗು, ನೀರಿನ ಸಂಪಿನಲ್ಲಿ ಬಿದ್ದು, ಉಸಿರುಗಟ್ಟಿದ್ದರಿಂದ ಮಗುವಿನ ಮೋಷಕರು ಸಂಜೆ ಸುಮಾರು 5:00 ಗಂಟೆಯ ವೇಳೆಗೆ ಚಿಕಿತ್ಸೆ ನೀಡುವಂತೆ ಆಸ್ಪತ್ರೆಗೆ ಕರೆತಂದಿದ್ದು, ಸದರಿ ಪ್ರಾಥಮಿಕ ಆರೋಗ್ಯ ಕೇಂದ್ರವು 24/7 ಆಗಿದ್ದು, ಮಗುವಿಗೆ ಚಿಕಿತ್ಸೆಗೆ ಸದರಿ ವೈದ್ಯರು ಕರ್ತವ್ಯದ ಅವಧಿಯಲ್ಲಿ ಕೇಂದ್ರ ಸ್ಥಾನದಲ್ಲಿ ಉಪಸ್ಥಿತರಿಲ್ಲದೇ, ಕರ್ತವ್ಯದ ಜವಾಬ್ದಾರಿ ನಿರ್ವಹಿಸದೆ ಸಿಗದೆ ಸಾವನ್ನಪ್ಪಿರುವ ಬಗ್ಗೆ ವೈದ್ಯರ ಕರ್ತವ್ಯಲೋಪ ಹಾಗೂ ಉದಾಸೀನತೆ ತೋರಿರುವ ಹಿನ್ನಲೆಯಲ್ಲಿ ಸದರಿಯವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಸೇವೆಯಿಂದ ಅಮಾನತ್ತುಗೊಳಿಸಿ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಸೂಕ್ತಕ್ರಮ ತೆಗೆದುಕೊಳ್ಳಲು ನಿರ್ಣಯಿಸಲಾಗಿದೆ. ಸೀನಪ್ಪ, ತುರ್ತು ವಾಹನ ಚಾಲಕರು, ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಡಿಗೇನಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ, ಕರ್ತವ್ಯದಲ್ಲಿಲ್ಲದೇ ದೂರವಾಣಿ ಕರೆಮಾಡಿದಾಗ ಕರೆಯನ್ನು ಸ್ವೀಕರಿಸದೇ ಕರ್ತವ್ಯ ನಿರ್ಲಕ್ಷ್ಯತೆ ತೋರಿರುವ ಕಾರಣದಿಂದ ಅಮಾನತುಗೊಳಿಸಲಾಗಿದೆ.
ಡಿಸೆಂಬರ್ 2, ಶುಕ್ರವಾರದಂದು ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು,ಆಡಳಿತ ವೈದ್ಯಧಿಕಾರಿ ಹಾಗೂ ಆಂಬ್ಯುಲೆನ್ಸ್ ಚಾಲಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.@Comm_dhfwka
1/2 pic.twitter.com/h8GDD0T2WA
— Dr Sudhakar K (@mla_sudhakar) December 3, 2022