ನವದೆಹಲಿ : ಶೀಘ್ರದಲ್ಲೇ ಆಫ್ರಿಕಾದಿಂದ ಇನ್ನೂ 12 ರಿಂದ 14 ಚಿರತೆಗಳನ್ನ ಭಾರತಕ್ಕೆ ತರಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಪರಿಸರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ರಾಜ್ಯಸಭೆಯಲ್ಲಿ ಈ ಮಹತ್ವದ ಮಾಹಿತಿ ನೀಡಿದ್ದು, ಮುಂದಿನ ಐದು ವರ್ಷಗಳಲ್ಲಿ ಆಫ್ರಿಕಾದಿಂದ 12 ರಿಂದ 14 ಚಿರತೆಗಳನ್ನ ಭಾರತಕ್ಕೆ ತರಲಾಗುವುದು ಎಂದು ಹೇಳಿದರು. ಇದಕ್ಕಾಗಿ ಭಾರತ ಸರ್ಕಾರವು ನಮೀಬಿಯಾ ಸರ್ಕಾರದೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ.
ಇತ್ತೀಚೆಗೆ, ನಮೀಬಿಯಾದಿಂದ ಎಂಟು ಚಿರತೆಗಳನ್ನ ಭಾರತಕ್ಕೆ ತರಲಾಯಿತು ಮತ್ತು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಯಿತು. ಇದರಲ್ಲಿ 5 ಹೆಣ್ಣು ಮತ್ತು 3 ಗಂಡು ಚಿರತೆಗಳಿವೆ. ಕುನೋದಲ್ಲಿ ಚೆನ್ನಾಗಿ ಹೊಂದಿಕೊಂಡ ನಂತರ, ಚಿರತೆಗಳು ಅಲ್ಲಿಯೂ ಬೇಟೆಯಾಡಲು ಪ್ರಾರಂಭಿಸಿವೆ.
ಸಂಸತ್ತಿನಲ್ಲಿ ಮಾಹಿತಿ ನೀಡಿದ ಕೇಂದ್ರ ಸಚಿವರು, ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಚಿರತೆಗಳನ್ನ ಭಾರತಕ್ಕೆ ಹಿಂದಿರುಗಿಸಲು 38.7 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಯೋಜನೆಯು 2021/22 ರಿಂದ ಪ್ರಾರಂಭವಾಗುತ್ತದೆ ಮತ್ತು 2025/26 ರವರೆಗೆ ನಡೆಯುತ್ತದೆ ಎಂದರು.
ಹೆಚ್ಚಿನ ಮಾಹಿತಿ ನೀಡಿದ ಅಶ್ವಿನಿ ಕುಮಾರ್ ಚೌಬೆ ಅವರು, ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾದ 8 ಚಿರತೆಗಳು ಸಂಪೂರ್ಣವಾಗಿ ಚೆನ್ನಾಗಿದ್ದು, 24 ಗಂಟೆಗಳ ಕಾಲ ನಿಗಾ ಇರಿಸಲಾಗಿದೆ ಎಂದರು.
BREAKING NEWS : ಶೀಘ್ರ ‘ರಷ್ಯಾ-ಉಕ್ರೇನ್’ ಯುದ್ಧ ಅಂತ್ಯ ; ರಷ್ಯಾ ಅಧ್ಯಕ್ಷ ಪುಟಿನ್ ಘೋಷಣೆ |Ukraine-Russia war
JOB ALERT : 814 P.U ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಶೀಘ್ರವೇ ಅಧಿಸೂಚನೆ : ಸಚಿವ ಬಿ.ಸಿ ನಾಗೇಶ್