ಬೆಂಗಳೂರು : ರಾಜ್ಯದಲ್ಲಿ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ 108 ಆ್ಯಂಬುಲೆನ್ಸ್ ಸೇವೆ ಮತ್ತೆ ಕೈಕೊಟ್ಟಿದ್ದು, ಸೇವೆಗಾಗಿ ಸಾರ್ವಜನಿಕರು ಕರೆ ಮಾಡಿದ್ರೆ ಸ್ಪಂದನೆ ಸಿಗುತ್ತಿಲ್ಲ. ಇದರಿಂದಾಗಿ ರೋಗಿಗಳು ಪರದಾಡುವಂತಾಗಿದೆ.
BIG NEWS : ʻಭಾರತವು ವಿಜ್ಞಾನ ಮತ್ತು ಸಂಶೋಧನೆಯ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುತ್ತಿದೆʼ: ಪ್ರಧಾನಿ ಮೋದಿ
ಹೌದು, 108 ಆ್ಯಂಬುಲೆನ್ಸ್ ಸೇವೆಯಲ್ಲಿ ಮತ್ತೆ ವ್ಯತ್ಯಯವಾಗಿದ್ದು, 108 ಕ್ಕೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಸೋಮವಾರ ಸಂಜೆಯಿಂದಲೂ ಕರೆ ಸ್ವೀಕರಿಸದಿರುವ ಸಮಸ್ಯೆಯಿದ್ದು, ಮಂಗಳವಾರ ತಡರಾತ್ರಿಯವರೆಗೂ ಈ ಸಮಸ್ಯೆ ಸುಧಾರಿಸಿಲ್ಲ.ಹೀಗಾಗಿ ಅನೇಕ ಜಿಲ್ಲೆಗಳಲ್ಲಿ ರೋಗಿಗಳು ಮತ್ತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸೋಮವಾರ ರಾತ್ರಿಯಿಂದ 108 ಆ್ಯಂಬುಲೆನ್ಸ್ ಸೇವೆಯಲ್ಲಿ ಸಮಸ್ಯೆ ಕಂಡುಬಂದಿದೆ.
BIGG NEWS : ಧಾರವಾಡ-ಬೆಂಗಳೂರು `ವಂದೇ ಭಾರತ್ ರೈಲು’ ಮಾರ್ಚ್ ನಿಂದ ಶುರು : ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ
ರಾಜ್ಯದಲ್ಲಿ ಆ್ಯಂಬುಲೆನ್ಸ್ ಸೇವೆಯನ್ನು ಜಿವಿಕೆ ಎಂಬ ಸಂಸ್ಥೆ ನಿರ್ವಹಿಸುತ್ತಿದ್ದು, ತನ್ನ ಕಾಲ್ ಸೆಂಟರ್ ಸಿಬ್ಬಂದಿಗಳಿಗೆ ವೇತನ ನೀಡದ ಹಿನ್ನೆಲೆಯಲ್ಲಿ ಅವರು ಕೆಲಸಕ್ಕೆ ಹಾಜರಾಗಿಲ್ಲದಿರುವುದರಿಂದ ಕರೆ ಸ್ವೀಕರಿಸಲು ಸಿಬ್ಬಂದಿ ಇಲ್ಲದಿರುವುದು ಸಮಸ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.