ರಾಮನಗರ : ರಾಮನಗರ ಜಿಲ್ಲೆಯಲ್ಲಿ 108 ಆ್ಯಂಬುಲೆನ್ಸ್ ಸಿಬ್ಬಂದಿ ದುರಹಂಕದಿಂದ ವರ್ತಸಿದ್ದು, ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳದಲ್ಲೇ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಬೈಕ್ನಿಂದ ಬಿದ್ದಿದ್ದ ಸವಾರನನ್ನು ನೋಡಿ ಊರಿನವರು ತಕ್ಷಣ 108 ಗೆ ಕರೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಬಂದ 108 ಅಲ್ಲಿ ಗಾಯಾಳುವನ್ನು ಮಲಗಿಸಿದ್ದಾರೆ. ಗಾಯಾಳು ಬೈಕ್ ಸವಾರನ ಜೊತೆ ಯಾರಾದರೂ ಸ್ಥಳೀಯರು ಆಸ್ಪತ್ರೆಗೆ ಬರುವಂತೆ ಕೇಳಿದ್ದಾರೆ. ಆದರೆ ಗಾಯಾಳು ಜೊತೆಗೆ ಯಾರೂ ಹೋಗದೇ ಇದ್ದಾಗ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಜೆಸಿಬಿ ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಸದ್ಯ 108 ಆ್ಯಂಬುಲೆನ್ಸ್ ಸಿಬ್ಬಂದಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.