ಬೆಂಗಳೂರು : 2021-22 ನೇ ಸಾಲಿನ ಉತ್ತಮ ಪ್ರಾಂಶುಪಾಲ, ಉಪನ್ಯಾಸಕ ಪ್ರಶಸ್ತಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು 10 ಮಂದಿಯನ್ನು ಆಯ್ಕೆ ಮಾಡಿದೆ.
ನೀವು ಫೋನ್ಗೆ ಅಡಿಕ್ಟ್ ಆಗಿದ್ದೀರಾ? ಹಾಗಾದ್ರೆ, ಇದರ ಬಳಕೆ ಕಡಿಮೆ ಮಾಡಲು ಈ 3 ಮಾರ್ಗಗಳನ್ನು ಅನುಸರಿಸಿ!
ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಬಸವನಗುಡಿಯನ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಜಿ.ನಾಗಣ್ಣ, ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಎಚ್. ಬೆಣ್ಣೆ, ಸರಕಾರಿ ಪಿಯು ಕಾಲೇಜಿನ ಸತೀಶ್ ಬೊಮ್ಮಯ್ಯ ನಾಯಕ್ ಆಯ್ಕೆಯಾಗಿದ್ದಾರೆ.
ಉತ್ತಮ ಉಪನ್ಯಾಸಕ ಪ್ರಶಸ್ತಿಗೆ ಆಯ್ಕೆಯಾದವರು
ಆರ್. ಚಂದ್ರಶೇಖರ್-ತುಮಕೂರು ಎಂಪ್ರೆಸ್ ಸರಕಾರಿ ಬಾಲಕಿಯರ ಪಿಯು ಕಾಲೇಜು
ಎಂ.ಎನ್. ಉಮೇಶ್-ಬೆಂಗಳೂರು ಉತ್ತರ ಪಿಯು ಕಾಲೇಜು
ಮಹಾವೀರ ಸಿಂಗ್ ಬಿ.ರಜಪೂತ್-ವಿಜಯಪುರ ಸರಕಾರಿ ಬಾಲಕಿಯರ ಪಿಯು ಕಾಲೇಜು
ಕೆ. ಮಲ್ಲಮ್ಮ-ಬೀದರ್ ಹಲಸೂರಿನ ಎಸ್.ಪಿ.ಕೆ ಸ್ವತಂತ್ರ ಪದವಿ ಪೂರ್ವ ಕಾಲೇಜು
ಶಿವಾನಂದ ಎಂ.ಕಲ್ಲೂರು-ಗದಗ ಸಿದ್ದಲಿಂಗ ನಗರದ ಸರ್ಕಾರಿ ಪಿಯು ಕಾಲೇಜು
ಶ್ರೀಶೈಲಾ ಕೋಲಾರ-ಚಿಕ್ಕೊಡಿ ಕೆರೂರು ಸರ್ಕಾರಿ ಪಿಯು ಕಾಲೇಜು
ಎಂ.ಪಿ. ಉದಯ ಕುಮಾರ್-ಉಡುಪಿಯ ಬೈಂದೂರಿನ ಸರ್ಕಾರಿ ಪಿಯು ಕಾಲೇಜು
ಆರ್. ಸದಾನಂದ –ಮೈಸೂರು ಹುಣಸೂರಿನ ಸರ್ಕಾರಿ ಪಿಯು ಕಾಲೇಜು