ನವದೆಹಲಿ : ಹರ್ ಘರ್ ಜಲ ಉತ್ಸವ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ನೀರನ್ನು ಉಳಿಸುವುದು ವಿಶ್ವದ ಅತಿದೊಡ್ಡ ಸವಾಲಾಗಿದೆ ಎಂದು ಹೇಳಿದರು. ನಮ್ಮ ಸರ್ಕಾರ ನೀರಿನ ಭದ್ರತೆಗಾಗಿ ಕೆಲಸ ಮಾಡುತ್ತಿದ್ದು, ನಾವು ಜಲಶಕ್ತಿಯ ಪ್ರತ್ಯೇಕ ಸಚಿವಾಲಯವನ್ನ ಸಹ ರಚಿಸಿದ್ದೇವೆ. ಗೋವಾವು ಪ್ರತಿ ಮನೆಗೂ ನೀರು ಒದಗಿಸಿದ ಮೊದಲ ರಾಜ್ಯವಾಗಿದೆ” ಎಂದರು.
ಜಲ ಜೀವನ್ ಮಿಷನ್ ಅಡಿಯಲ್ಲಿ, ನಮ್ಮ ಸರ್ಕಾರವು 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ಕೊಳವೆ ಮೂಲಕ ನೀರನ್ನ ಒದಗಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದಲ್ಲದೇ, ಕಳೆದ 3 ವರ್ಷಗಳಲ್ಲಿ 7 ಕೋಟಿ ಗ್ರಾಮೀಣ ಕುಟುಂಬಗಳಿಗೆ ಕೊಳವೆ ನೀರಿನ ಸೌಲಭ್ಯವನ್ನ ಒದಗಿಸಲಾಗಿದೆ, ಇದು ಸಾಮಾನ್ಯ ಸಾಧನೆಯಲ್ಲ. ಅಟಲ್ ಭೂಜಲ್ ಯೋಜನೆ, ಜಲ ಜೀವನ್ ಮಿಷನ್, ದೇಶದ ಪ್ರತಿ ಜಿಲ್ಲೆಯಲ್ಲೂ 75 ಕೆರೆಗಳ ನಿರ್ಮಾಣ ಮತ್ತು ನದಿಗಳ ಜೋಡಣೆ ದೇಶದ ಪ್ರತಿ ಮನೆಗೂ ನೀರು ಒದಗಿಸುವ ಗುರಿ ಹೊಂದಲಾಗಿದೆ ಎಂದರು.
Goa achieves milestone of being first state to become Har Ghar Jal certified; 10 crore rural households provided piped water: PM
Read @ANI Story | https://t.co/cokXCU4bMc#PMModi #HarGharJal #Goa #HarGharJalUtsav #JalJeevanMission pic.twitter.com/D7sG7gxglG
— ANI Digital (@ani_digital) August 19, 2022
ಪ್ರತಿ ಮನೆಯ ನೀರಿಗಾಗಿ ಜಲಶಕ್ತಿ ಸಚಿವಾಲಯ ರಚನೆ
ಸ್ವಾತಂತ್ರ್ಯದ 7 ದಶಕಗಳಲ್ಲಿ, ದೇಶದ 3 ಕೋಟಿ ಗ್ರಾಮೀಣ ಕುಟುಂಬಗಳು ಮಾತ್ರ ಕೊಳವೆ ನೀರಿನ ಸೌಲಭ್ಯವನ್ನ ಹೊಂದಿದ್ದವು ಎಂದು ಪ್ರಧಾನಿ ಮೋದಿ ಹೇಳಿದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ, 16 ಕೋಟಿ ಗ್ರಾಮೀಣ ಕುಟುಂಬಗಳು ನೀರಿಗಾಗಿ ಹೊರಗಿನಿಂದ ಬಂದ ಮೂಲಗಳನ್ನು ಅವಲಂಬಿಸಬೇಕಾಯಿತು. ಇಷ್ಟು ದೊಡ್ಡ ಜನಸಮೂಹವನ್ನ ನಾವು ಒದ್ದಾಡುವುದನ್ನ ಬಿಡಲು ಸಾಧ್ಯವಾಗಲಿಲ್ಲ, ಆದ್ದರಿಂದ ನಾವು ಕೆಂಪು ಕೋಟೆಯಿಂದ ಪ್ರತಿ ಮನೆಗೂ ನೀರನ್ನು ತಲುಪಿಸುವುದಾಗಿ ಘೋಷಿಸಿದ್ದೆವು. ಇದಕ್ಕಾಗಿ 3 ಲಕ್ಷ 60 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗದ ಅಡೆತಡೆಗಳ ಹೊರತಾಗಿಯೂ, ಈ ಅಭಿಯಾನದ ವೇಗವು ನಿಧಾನವಾಗಲಿಲ್ಲ. ದೇಶವು ಕಳೆದ 3 ವರ್ಷಗಳಲ್ಲಿ ಕಳೆದ 7 ದಶಕಗಳಲ್ಲಿ ಮಾಡಿದ ಕೆಲಸಕ್ಕಿಂತ ಎರಡು ಪಟ್ಟು ಹೆಚ್ಚು ಮಾಡಿದೆ. ಇದು ಮಾನವ-ಕೇಂದ್ರಿತ ಅಭಿವೃದ್ಧಿಯ ಉದಾಹರಣೆಯಾಗಿದೆ, ನಾನು ಈ ಬಾರಿ ಸ್ವಾತಂತ್ರ್ಯ ದಿನದಂದು ಅದರ ಬಗ್ಗೆ ಮಾತನಾಡಿದೆ ಎಂದರು.
ಪ್ರತಿ ಮನೆಗೂ ನೀರು ತಲುಪಿದಾಗ, ಸಹೋದರಿಯರು ಮತ್ತು ಮುಂದಿನ ಪೀಳಿಗೆಗೆ ಹೆಚ್ಚಿನ ಪ್ರಯೋಜನವಾಗುತ್ತದೆ, ಅಪೌಷ್ಟಿಕತೆಯ ವಿರುದ್ಧದ ಹೋರಾಟವನ್ನ ಬಲಪಡಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಆದ್ದರಿಂದ, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಮಿಷನ್ʼನ ಕೇಂದ್ರಬಿಂದುವಾಗಿದ್ದಾರೆ.
“ಗೋವಾವು ಪ್ರತಿ ಮನೆಗೂ ನೀರನ್ನು ತಲುಪಿಸಿದ ಮೊದಲ ರಾಜ್ಯವಾಗಿದೆ. ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು ಸಹ ನೀರು-ಪ್ರಮಾಣೀಕೃತ ಕೇಂದ್ರಾಡಳಿತ ಪ್ರದೇಶಗಳಾಗಿವೆ. ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಮಂತ್ರಿಯವರು, ಹಿಂದಿನ ಸರ್ಕಾರಗಳು ಕೇವಲ ಮಾತನಾಡಿದವು, ಕೆಲಸ ಮಾಡಲಿಲ್ಲ. ನಮ್ಮ ಸರ್ಕಾರ ಈ ಕೆಲಸವನ್ನು ಮಾಡಿದೆ. ನಾವು ಪ್ರತಿಯೊಂದು ದಿಕ್ಕಿನಲ್ಲಿಯೂ ಫಲಿತಾಂಶಗಳನ್ನು ಪಡೆಯುತ್ತಿದ್ದೇವೆ. ಅಮೃತಕಾಲವು ಇದಕ್ಕಿಂತ ಉತ್ತಮ ಆರಂಭವನ್ನು ಪಡೆಯಲು ಸಾಧ್ಯವಿಲ್ಲ” ಎಂದರು.