ನವದೆಹಲಿ : ಕೇಂದ್ರ ಸರ್ಕಾರವು ಮೂಲ ಆಮದು ಸುಂಕವನ್ನ ಶೇಕಡಾ 5ರಷ್ಟು ಹೆಚ್ಚಿಸಿದೆ. ಅದ್ರಂತೆ, ಶೇ.7.5 ಇದ್ದ ಆಮದು ಸುಂಕ ಶೇ.12.5ಕ್ಕೆ ಹೆಚ್ಚಾಗಿದೆ. ಆಮದು ಸುಂಕ ಹೆಚ್ಚಿಸಿದ ದಿನವೇ ಚಿನ್ನದ ಬೆಲೆ ರೂ.1,310ರಷ್ಟು ಏರಿಕೆ ಕಂಡಿರುವುದು ಗಮನಾರ್ಹ. ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು, ಸತತ ಎರಡು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗ್ತಿರುವುದ್ರಿಂದ ಆಭರಣ ಪ್ರಿಯರಿಗೆ ಶಾಕ್ ಆಗಿದೆ.

ಗುರುವಾರ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 50,890 ರೂಪಾಯಿ ಇದ್ದು, ಶುಕ್ರವಾರ ರೂ.1,310 ಮತ್ತು ಶನಿವಾರ ರೂ.140 ಏರಿಕೆಯಾಯ್ತು. ಇನ್ನು ಎರಡು ದಿನಗಳಲ್ಲಿ 10 ಗ್ರಾಂ ಚಿನ್ನ 1,450 ರೂಪಾಯಿ ಏರಿಕೆಯಾಗಿದೆ. ಪ್ರಸ್ತುತ, 10 ಗ್ರಾಂ ಶುದ್ಧ ಚಿನ್ನದ ಬೆಲೆ ರೂ.52,340ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.

ಪರಿಸ್ಥಿತಿ ಮುಂದುವರೆದಂತೆ ಚಿನ್ನದ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ ವಾರವೂ ಚಿನ್ನದ ಬೆಲೆ ಏರಿಕೆಯಾಗಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಅಂದ್ಹಾಗೆ, ಡಾಲರ್ ಎದುರು ರೂಪಾಯಿ ದುರ್ಬಲವಾಗಿರುವುದರಿಂದ ಚಿನ್ನದ ಮೇಲಿನ ಆಮದು ಸುಂಕವನ್ನ ಹೆಚ್ಚಿಸುವ ಮೂಲಕ ಆಮದು ತಗ್ಗಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

Share.
Exit mobile version