ತುಮಕೂರು : ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಅವರ ಫ್ಲೇಕ್ಸ್ ಗಲಾಟೆ ತುಮಕೂರಿಗೂ ಕಾಲಿಟ್ಟಿದ್ದು, ತುಮಕೂರಿನಲ್ಲಿ ಕಿಡಗೇಡಿಗಳು ಸಾವರ್ಕರ್ ಫ್ಲೇಕ್ಸ್ ಗೆ ಕತ್ತರಿ ಹಾಕಿರುವ ಘಟನೆ ನಡೆದಿದೆ.
ತುಮಕೂರಿನ ಎಂಪ್ರೆಸ್ ಕಾಲೇಜಿನ ಬಳಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಸಾವರ್ಕರ್ ಅವರ ಫ್ಲೇಕ್ಸ್ ಹಾಕಲಾಗಿತ್ತು, ಆದರೆ ಮಧ್ಯರಾತ್ರಿ ಕಿಡಿಗೇಡಿಗಳು ಫ್ಲೇಕ್ಸ್ ಹರಿದು ಪರಾರಿಯಾಗಿದ್ದಾರೆ. ಈ ಮೂಲಕ ಶಿವಮೊಗ್ಗದ ಬಳಿಕ ತುಮಕೂರಿನಲ್ಲೂ ಫ್ಲೇಕ್ಸ್ ಫೈಟ್ ಶುರುವಾಗಿದೆ.
ಶಿವಮೊಗ್ಗದಲ್ಲಿ ವಿ ಡಿ ಸಾವರ್ಕರ್ ಫ್ಲೆಕ್ಸ್ ವಿವಾದದಿಂದಾಗಿ ಬಿಗುವಿನ ವಾತಾವಣವಿದೆ. ಅಲ್ಲದೇ ಎರಡು ಕಡೆಗಳಲ್ಲಿ ಇಬ್ಬರಿಗೆ ಚಾಕುವಿನಿಂದ ಇರಿದ ಪರಿಣಾಮ ಮತ್ತಷ್ಟು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.