ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳ ಬಂಧನ ಪ್ರಕರಣ ಸಂಬಂಧ 5 ನೇ ಆರೋಪಿ ವಕೀಲ ಗಂಗಾಧಯ್ಯ ಚಿತ್ರದುರ್ಗದಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ.
BIGG BREAKING NEWS : ಮದ್ಯ ನೀತಿ ಹಗರಣ : ದೆಹಲಿ, ಬೆಂಗಳೂರು ಸೇರಿದಂತೆ 30 ಕಡೆ `ED’ ದಾಳಿ
ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಶ್ರೀ ಅವರನ್ನು ಕೋರ್ಟ್ ಸೆ.14 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಭಾನುವಾರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಭಾನುವಾರ ಪೊಲೀಸರು ಶ್ರೀಗಳನ್ನು ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೋಮಲ ಶ್ರೀಗಳಿಗೆ ಸೆ. 14 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದರು.
ಇದೀಗ ಶ್ರೀಗಳ ನ್ಯಾಯಾಂಗ ಬಂಧನದ ಬೆನ್ನಲ್ಲೇ ಪೋಕ್ಸೋ ಪ್ರಕರಣದ 5 ನೇ ಆರೋಪಿ ವಕೀಲ ಗಂಗಾಧರಯ್ಯಪೊಲೀಸರಿಗೆ ಶರಣಾಗಿದ್ದು, ಸದ್ಯ ಗಂಗಾಧರಯ್ಯನನ್ನು ಚಿತ್ರದುರ್ಗದ ಡಿವೈಎಸ್ ಪಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
BIGG NEWS: ಬೆಂಗಳೂರಿನ ಜನರೇ ಎಚ್ಚರ… ! ಇನ್ನೂ ಎರಡು ದಿನ ಭಾರಿ ಮಳೆ ; ಯೆಲ್ಲೋ ಅಲರ್ಟ್ ಘೋಷಣೆ