ಸ್ಕಾಟ್ ಲ್ಯಾಂಡ್ : ಜೇಮ್ಸ್ ಬಾಂಡ್, ಹ್ಯಾರಿ ಪಾಟರ್ ಸಿನಿಮಾಗಳ ಖ್ಯಾತಿಯ ನಟ ರಾಬಿ ಕೋಲ್ಟ್ರೈನ್ (72) ಅವರು ನಿಧನರಾಗಿದ್ದಾರೆ.ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ನಟ ರಾಬಿ ಕೋಲ್ಟ್ರೈನ್ ಸ್ಕಾಟ್ ಲ್ಯಾಂಡ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಟ ರಾಬಿ ಕೋಲ್ಟ್ರೈನ್ ಗೆ ಇಬ್ಬರು ಮಕ್ಕಳಿದ್ದಾರೆ.
ಗೆ
ಹ್ಯಾರಿ ಪಾಟರ್ ಚಿತ್ರಗಳಲ್ಲಿ ಹ್ಯಾಗ್ರಿಡ್ ಪಾತ್ರದಲ್ಲಿ ನಟಿಸಿದ್ದ ನಟ ರಾಬಿ ಕೋಲ್ಟ್ರೇನ್ ಅವರು ಐಟಿವಿ ಪತ್ತೇದಾರಿ ನಾಟಕ ಕ್ರ್ಯಾಕರ್ ಮತ್ತು ಜೇಮ್ಸ್ ಬಾಂಡ್ ಚಲನಚಿತ್ರಗಳಾದ ಗೋಲ್ಡನ್ ಐ ಮತ್ತು ದಿ ವರ್ಲ್ಡ್ ಈಸ್ ನಾಟ್ ಎನಫ್ ನಲ್ಲಿ ನಟಿಸಿದ್ದರು.
ರಾಬಿ ಅವರಿಗೆ 1990 ರ ಸಮಯದಲ್ಲಿ ಮೊದಲ ಬಾರಿಗೆ ಕ್ರ್ಯಾಕರ್ ಸಿರೀಸ್ ನಲ್ಲಿ ಡಿಟೆಕ್ಟಿವ್ ಪಾತ್ರ ಮಾಡಿದ್ದಕ್ಕೆ ದೊಡ್ಡ ಜನಪ್ರಿಯತೆ ಸಿಕ್ಕಿತು. ಈ ನಟನೆಗಾಗಿ ಅವರಿಗೆ ಬ್ರಿಟಿಷ್ ಅಕಾಡೆಮಿ ಟೆಲಿವಿಷನ್ ಅವಾರ್ಡ್ ಪಡೆದಿದ್ದರು. 2006 ರ ಹೊಸ ವರ್ಷದ ಗೌರವಗಳ ಪಟ್ಟಿಯಲ್ಲಿ ಕೋಲ್ಟ್ರೇನ್ ಅವರನ್ನು ನಾಟಕಕ್ಕೆ ಅವರ ಸೇವೆಗಳಿಗಾಗಿ ಒಬಿಇ ಆಗಿ ಮಾಡಲಾಯಿತು ಮತ್ತು 2011 ರಲ್ಲಿ ಚಲನಚಿತ್ರಕ್ಕೆ ಅತ್ಯುತ್ತಮ ಕೊಡುಗೆಗಾಗಿ ಅವರಿಗೆ ಬಾಫ್ಟಾ ಸ್ಕಾಟ್ಲ್ಯಾಂಡ್ ಪ್ರಶಸ್ತಿಯನ್ನು ನೀಡಲಾಗಿತ್ತು.