ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆ ( Karnataka Assembly Election 2023 ) ಸಮೀಪಿಸುತ್ತಿರುವಾಗಲೇ, ದಿನೇ ದಿನೇ ಎಎಪಿ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಇಂದು ಸ್ಯಾಂಡಲ್ ವುಡ್ ಹಾಸ್ಯ ಕಲಾವಿಧ ಟೆನ್ನಿಸ್ ಕೃಷ್ಣ ( Sandalwood Comedy Actor Tennis Krishna ) ಅವರು ಅಮ್ ಆದ್ಮಿ ಪಕ್ಷವನ್ನು ( Am Admi Party ) ಸೇರ್ಪಡೆಯಾಗಿದ್ದಾರೆ.
Watch Video: ʻತಿರಂಗಾ ಯಾತ್ರೆʼ ವೇಳೆ ಸ್ಕೂಟಿ ಓಡಿಸಿದ ಕೇಂದ್ರ ಸಚಿವೆ ʻಸ್ಮೃತಿ ಇರಾನಿʼ!
ನಗರದ ಖಾಸಗೀ ಹೋಟೆಲ್ ನಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಇನ್ನಿತರ ಹಿರಿಯ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆ ನಟ ಟೆನಿಸ್ ಕೃಷ್ಣ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
BIGG NEWS: ಕೇರಳದ ಪಾಲಕ್ಕಾಡ್ನಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆ |Explosives found in Kerala’s
ಈ ವೇಳೆ ಮಾತನಾಡಿದ ಟೆನಿಸ್ ಕೃಷ್ಣ, ನಾನು ಅಧಿಕಾರಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ. ಎಎಪಿಯಲ್ಲಿ ಭ್ರಷ್ಟಾಚಾರ ಇಲ್ಲ. ಹೀಗಾಗಿ ಜನರ ಸೇವೆ ಮಾಡಲು ನಾನು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ.ಸರ್ಕಾರಿ ಕಾಲೇಜುಗಳನ್ನು ಮುಚ್ಚುತ್ತಿರುವುದರ ವಿರುದ್ಧ ಹೋರಾಟ ಮಾಡುತ್ತೇನೆ. ಕೋಲಾರದಲ್ಲಿ ನೀರಿನ ಸಮಸ್ಯೆ ಬಗ್ಗೆ ಹೋರಾಟ ಮಾಡುವೆ. ಬಿಜೆಪಿ ಬಲವಂತವಾಗಿ ಹಿಂದಿ ಹೇರಿಕೆ ಮಾಡಲು ಯತ್ನಿಸುತ್ತಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ, ಕನ್ನಡ ಉಳಿಯಬೇಕು ಎಂದು ಹೇಳಿದ್ದಾರೆ.
BIGG NEWS: ತುಮಕೂರಿನಲ್ಲಿ ನಿರಂತರ ಮಳೆ: ಗುಬ್ಬಿಯಲ್ಲಿ 60ಕ್ಕೂ ಹೆಚ್ಚು ಮನೆ ಕುಸಿತ; ಗ್ರಾಮಸ್ಥರು ಕಂಗಾಲು