ಬೆಂಗಳೂರು : ಹುತಾತ್ಮ ಅರಣ್ಯ ಇಲಾಖೆಯ ಸಿಬ್ಬಂದಿಗಳ ಪರಿಹಾರವನ್ನು 50 ಲಕ್ಷ ರೂ.ಗೆ ಹೆಚ್ಚಳ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಹುತಾತ್ಮ ಅರಣ್ಯ ಇಲಾಖೆಯ ಸಿಬ್ಬಂದಿಗಳ ಪರಿಹಾರ ಮೊತ್ತವನ್ನು 50 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಮೊದಲು ಹುತಾತ್ಮ ಅರಣ್ಯ ಸಿಬ್ಬಂದಿಗೆ 20 ಲಕ್ಷ ರೂ. ನೀಡಲಾಗುತ್ತಿತ್ತು. ಯಡಿಯೂರಪ್ಪ ಅವರು 30 ಲಕ್ಷ ರೂ.ಗೆ ಏರಿಸಿದ್ದರು. ಇದೀಗ 50 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.
ನೇಮಕಾತಿ ಸಂಬಂಧಿ ಎಲ್ಲಾ ಕೆಲಸಗಳು ಸುಲಭ ಮಾಡುತ್ತೇವೆ. ಅರಣ್ಯವನ್ನು ನೀವು ರಕ್ಷಣೆ ಮಾಡಿ, ನಾವು ನಿಮ್ಮನ್ನು ರಕ್ಷಣೆ ಮಾಡುತ್ತೇವೆ. ಎಕೋ ಸೆನ್ಸಿಟಿವ್ ವಲಯಗಳ ಹೆಚ್ಚಳಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಮಾಡಲಾಗುವುದು. ಹೊಸ ವಿಧಾನದ ನೈಸರ್ಗಿಕ ಸಂಪತ್ತು ಆಕರ್ಷಿಸುವ ಕೆಸಲ ಆಗುತ್ತಿದೆ ಎಂದರು.